ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಠಾಧೀಶರು ರಾಜಕೀಯದಿಂದ ದೂರವಿರಬೇಕು: ಮುರುಘಶ್ರೀ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಠಾಧೀಶರು ರಾಜಕೀಯದಿಂದ ದೂರವಿರಬೇಕು: ಮುರುಘಶ್ರೀ
ಚುನಾವಣೆಯಲ್ಲಿ ನಿಲ್ಲುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಕೆಲವು ನಿಬಂಧನೆಗಳನ್ನು ಹೇರಬೇಕೆಂದಿರುವ ಚಿತ್ರದುರ್ಗ ಬೃಹನ್ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಅವರು, ರಾಜಕೀಯದಿಒಂದ ಮಠಾಧೀಶರು ದೂರವಿರಬೇಕು ಎಂದು ಹಿತವಚನ ನುಡಿದರು.

ವರದಿಗಾರರ ಕೂಟ ಹಾಗೂ ಪ್ರೆಸ್ ಕ್ಲಬ್ ಜಂಟಿಯಾಗಿ ಆಯೋಜಿಸಿದ ಸಂವಾದದಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗೆ ಒಂದೇ ಮಗು ಇರಬೇಕು. ವಾರ್ಷಿಕ 1 ಕೋಟಿ ರೂ. ಆದಾಯವಿರುವ ಸುಶಿಕ್ಷಿತ ಅಭ್ಯರ್ಥಿ ಸ್ಪರ್ಧಿಸಬೇಕೆಂಬ ನಿಯಮವನ್ನು ಚುನಾವಣಾ ಆಯೋಗ ರೂಪಿಸಬೇಕು ಎಂದು ಹೇಳಿದರು.

ಪ್ರಸ್ತುತ ರಾಜಕಾರಣದಲ್ಲಿ ಮೋಸ, ವಂಚನೆ, ಗೂಂಡಾಗಿರಿ ಮಾಡುವಂಥವರು ಮಾತ್ರ ರಾಜಕೀಯಕ್ಕೆ ಬರುತ್ತಿರುವುದರಿಂದ ಅದೇ ಅವರ ಅರ್ಹತೆಗಳಾಗಿವೆ. ಹಾಗಾಗಿ ಗುಣಮಟ್ಟದ ರಾಜಕಾರಣಿಗಳು ಚುನಾವಣೆಯಿಂದ ದೂರ ಉಳಿಯುವಂತಾಗಿದೆ ಎಂದರು.

ಚುನಾವಣೆಯಲ್ಲಿ ಅಭ್ಯರ್ಥಿಗೆ 2 ಅವಧಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಅವರು ಅಭಿಪ್ರಾಯಪಟ್ಟರು. ಬಿಸಿಯೂಟ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸುತ್ತೂರು ಮಠ ಹಾಗೂ ಇಸ್ಕಾನ್‌‌ಗೆ ವಹಿಸಕೊಟ್ಟಿದ್ದರು. ಅವು ಇಂದು ಸಫಲಕಂಡಿವೆ. ಅಂತಹ ಯೋಜನೆಗಳನ್ನು ಜಾರಿಗೆ ತರಬೇಕೆಂದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಠಾಧಿಪತಿಗಳು ಪ್ರೋತ್ಸಾಹಿಸಬೇಕೆ ಹೊರತು ಅವರಿಗೆ ಮತ ಹಾಕಿ ಇವರಿಗೆ ಮತಹಾಕಿ ಎನ್ನಬಾರದು ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇವೇಗೌಡರಿಗೆ ಶನಿ ಹಿಡಿದಿದೆ: ಸಿ.ಟಿ.ರವಿ
ಕಾಂಗ್ರೆಸ್-ಜೆಡಿಎಸ್ ಧೂಳೀಪಟವಾಗಲಿದೆ: ಯಡಿಯೂರಪ್ಪ
ಬಹಿರಂಗ ಚರ್ಚೆಗೆ ಸಿದ್ಧ: ಎಚ್.ಡಿ. ಕುಮಾರಸ್ವಾಮಿ
ಸಿಎಂಗೆ ಕವಡೆ ಕೊಟ್ಟು ಮೆಜೆಸ್ಟಿಕ್‌‌ನಲ್ಲಿ ಕೂರಿಸಬೇಕು: ಬಂಗಾರಪ್ಪ
ಕಾಂಗ್ರೆಸ್‌‌ನ ವಿ.ಸೋಮಣ್ಣ ಬಿಜೆಪಿ ಸೇರ್ಪಡೆ
ಕತ್ತೆ, ಒಂಟೆಗಳಿಗೆ ಪೂಜೆ ಸಲ್ಲಿಸಿದ ವಾಟಾಳ್!