ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜ್ಯದಲ್ಲಿ ಬಿಜೆಪಿಗೆ 22ಸ್ಥಾನ: ಶೋಭಾ ಕರಂದ್ಲಾಜೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯದಲ್ಲಿ ಬಿಜೆಪಿಗೆ 22ಸ್ಥಾನ: ಶೋಭಾ ಕರಂದ್ಲಾಜೆ
ರಾಜ್ಯದಲ್ಲಿ ಬಿಜೆಪಿ ಪರ ಅಲೆ ಬೀಸುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕನಿಷ್ಠ 22 ಸ್ಥಾನ ಗಳಿಸಲಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತ ವೈಫಲ್ಯದಿಂದ ಬೇಸತ್ತಿರುವ ಜನತೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಇದರಿಂದಾಗಿ ದಕ್ಷಿಣ ಭಾರತದಲ್ಲಿಯೇ ಬಿಜೆಪಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದರು.

ದೇಶ ರಕ್ಷಣೆಯಲ್ಲಿ ವೈಫಲ್ಯ, ರಾಜ್ಯದ ಬಗ್ಗೆ ಕೇಂದ್ರದ ಮಲತಾಯಿ ಧೋರಣೆ, ಬೆಲೆ ಏರಿಕೆ, ರಾಜ್ಯ ಸರ್ಕಾರದ ಉತ್ತಮ ಆಡಳಿಯ, ಆಡ್ವಾಣಿಯವರನ್ನು ಪ್ರಧಾನಿಯನ್ನಾಗಿ ಮಾಡುವುದು ಸೇರಿದಂತೆ ವಿವಿಧ ವಿಷಯಗಳು ಚುನಾವಣೆಯ ಪ್ರಮುಖ ಅಂಶಗಳಾಗಿವೆ ಎಂದು ತಿಳಿಸಿದರು.

ಬಿಜೆಪಿ ಬಲವರ್ಧನೆಗಾಗಿ ಕಪ್ಪುಚುಕ್ಕೆ ಇಲ್ಲದವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವೆ ಶೋಭಾ ಹೇಳುತ್ತಿದ್ದಂತೆ, ಶಿವರಾಮೇಗೌಡ ಹಾಗೂ ಯೋಗೀಶ್ವರ್ ಕಪ್ಪುಚುಕ್ಕೆ ಇಲ್ಲದ ವ್ಯಕ್ತಿಗಳೇ ಎಂಬ ಪ್ರತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೇ ಮೌನಕ್ಕೆ ಶರಣಾದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಜಿ ಪ್ರಧಾನಿ ದೇವೇಗೌಡರು ಸಾಲಗಾರರು!
ಕಾಂಗ್ರೆಸ್‌ನಿಂದ ದೇಶ ಸತ್ಯನಾಶ: ಮೋದಿ ಕಿಡಿನುಡಿ
ಕಾವೇರಿಗಾಗಿ ಸಚಿವ ಸ್ಥಾನ ತ್ಯಾಗ: ಅಂಬರೀಶ್
ಕಾಂಗ್ರೆಸ್ ಮಣ್ಣಾಗುತ್ತಿರುವ ಹಡಗು: ಚಂದ್ರೇಗೌಡ
ಬಂಗಾರಪ್ಪಗೆ ಸೋಲಿನ ಭೀತಿ: ಯಡಿಯೂರಪ್ಪ
ಮಠಾಧೀಶರು ರಾಜಕೀಯದಿಂದ ದೂರವಿರಬೇಕು: ಮುರುಘಶ್ರೀ