ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಖರ್ಗೆ ರಾಜೀನಾಮೆ: ಸಿದ್ದು ಹಾದಿ ಸುಗಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖರ್ಗೆ ರಾಜೀನಾಮೆ: ಸಿದ್ದು ಹಾದಿ ಸುಗಮ
ಗುಲ್ಬರ್ಗಾ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಶನಿವಾರ ತನ್ನ ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆ ಪಕ್ಷವನ್ನು ಹೈ ಕಮಾಂಡಿಗೆ ಕಳುಹಿಸಿದ್ದಾರೆ.

ಕಾಂಗ್ರೆಸ್ ಸೇರಿ ಎರಡು ವರ್ಷಗಳಾದರೂ ಇನ್ನೂ ಸೂಕ್ತ ಸ್ಥಾನಮಾನ ಸಿಗದೆ ಅತೃಪ್ತಿಯಲ್ಲಿರುವ ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯನ ಸ್ಥಾನ ನೀಡುವ ಉದ್ದೇಶದಿಂದಲೇ ಹೈಕಮಾಂಡ್ ಖರ್ಗೆಯವರನ್ನು ಚುನಾವಣಾ ಕಣಕ್ಕೆ ಇಳಿಸಿತ್ತು. ಇಚ್ಚೆಇಲ್ಲದ ಖರ್ಗೆಯವರು ಒಲ್ಲದ ಮನಸ್ಸಿನಿಂದಲೇ ಕಣಕ್ಕಳಿದಿದ್ದಾರೆ. ಈ ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರಬೇಕು ಎಂಬುದು ಖರ್ಗೆಯವರ ಮಹತ್ವಾಕಾಂಕ್ಷೆ.

ಇದೀಗ ವಿಪಕ್ಷ ನಾಯಕನ ಸ್ಥಾನಮಾನ ಇನ್ನೂ ದೊರಕದೆ ಇರುವ ಕಾರಣ ಪಕ್ಷದ ಪರ ಪ್ರಚಾರದಿಂದ ದೂರ ಉಳಿಯುವುದಾಗಿ ಸಿದ್ದರಾಮಯ್ಯ ಬೆಂಬಲಿಗರು ಬೆದರಿಕೆ ಹಾಕಿದ್ದಾರೆನ್ನಲಾಗಿರುವ ಹಿನ್ನೆಲೆಯಲ್ಲಿ ಈ ಕ್ಷಿಪ್ರ ಬೆಳವಣಿಗೆ ಉಂಟಾಗಿದೆ.

ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿದ್ದ ಸಿದ್ದರಾಮಯ್ಯ ಕಳೆದ ಬಾರಿಯ ಉಪಚುನಾವಣೆಯಲ್ಲಿ ಪ್ರಚಾರದಿಂದ ದೂರ ಉಳಿದು ಪರೋಕ್ಷವಾಗಿ ಬಿಜೆಪಿ ಗೆಲುವಿಗೆ ಸಹಕರಿಸಿದ್ದರು. ಬಳಿಕ ಈ ಬಾರಿಯ ಲೋಕಸಭಾ ಚುನಾವಣೆಗೆ ಖರ್ಗೆಯವರನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಉತ್ಸಾಹದಿಂದಲೇ ಪ್ರಚಾರಕ್ಕಿಳಿದಿದ್ದರು.

ಆದರೆ ಮತ್ತೆ ಸಿದ್ದರಾಮಯ್ಯ ಮುನಿಸಿಕೊಂಡಿರುವ ಸೂಚನೆ ಸಿಕ್ಕಿರುವಂತೆ ಖರ್ಗೆ ಅವರ ಕೈಯಲ್ಲಿ ರಾಜೀನಾಮೆ ಕೊಡಿಸಲಾಗಿದೆ ಎನ್ನಲಾಗಿದೆ.

ಕಾಂಗ್ರೆಸ್ ಸ್ಥಾನಮಾನ: ಮತ್ತೆ ಮುನಿಸಿಕೊಂಡ ಸಿದ್ದು
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೂಕ್ತ ಸಮಯದಲ್ಲಿ ಬಿಜೆಪಿಗೆ ಸೂಕ್ತ ಉತ್ತರ: ಡಿಕೆಶಿ
ಕಾಂಗ್ರೆಸ್ ಸ್ಥಾನಮಾನ: ಮತ್ತೆ ಮುನಿಸಿಕೊಂಡ ಸಿದ್ದು
ಮಲಬಾರಿ ವಕೀಲರ ಹತ್ಯೆ: ರವಿ ಪೂಜಾರಿ ಕೃತ್ಯ?
ಡಿವಿಎಸ್, ಅಂಬಿ, ರಾಘವೇಂದ್ರ ನಾಮಪತ್ರ ಸಲ್ಲಿಕೆ
ಕೈ ಕತ್ತರಿಸಿ ಹೇಳಿಕೆ: ಕಾಗೋಡು ಜಾಮೀನು ಅರ್ಜಿ ತಿರಸ್ಕೃತ
20 ಸೀಟು ಕೊಡಿ ನನ್ನ ತಾಕತ್ತು ತೋರಿಸ್ತೇನೆ: ದೇವೇಗೌಡ