ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಾಹಿತಿ, ಹೋರಾಟಗಾರ ಬಿ.ಎಂ. ಇದಿನಬ್ಬ ವಿಧಿವಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಹಿತಿ, ಹೋರಾಟಗಾರ ಬಿ.ಎಂ. ಇದಿನಬ್ಬ ವಿಧಿವಶ
ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಸಾಹಿತಿ, ಮಾಜಿ ಶಾಸಕ ಕನ್ನಡ ಹೋರಾಟಗಾರ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ಬಿ.ಎಂ.ಇದಿನಬ್ಬ ಮಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ನಡೆಯಲಿದೆ.

ಶನಿವಾರ ನಸುಕಿನಲ್ಲಿ ನಗರದ ಖಾಸಗೀ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ ಅವರು ಕಳೆದ ಕೆಲವು ತಿಂಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಆರು ತಿಂಗಳ ಹಿಂದೆ ಅವರ ಪತ್ನಿ ಸಾವನ್ನಪ್ಪಿದ್ದರು.

ತನ್ನ ನಡೆನುಡಿಯಲ್ಲಿ ಸರಳ ಸಜ್ಜನಿಕೆ ತೋರಿದ್ದ ಇದಿನಬ್ಬ ಗಾಂಧೀ ವಾದಿ. ಇವರು ಸ್ವಾತಂತ್ರ್ಯ ಹೋರಾಟಗಾರರಾಗಿ ಅಪ್ರತಿಮ ದೇಶಭಕ್ತರಾಗಿ ಗುರುತಿಸಿಕೊಂಡಿದ್ದರು. ಇವರು ಮೂರು ಅವಧಿಗೆ ಶಾಸಕರಾಗಿದ್ದರು. ಕನ್ನಡ ಪ್ರೇಮಿ, ಪ್ರಗತಿಪರ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಇವರ ಹಲವು ಪುಸ್ತಕಗಳು ಪ್ರಕಟವಾಗಿವೆ.

ಇದಿನಬ್ಬರ ಸಾಹಿತ್ಯಗಳು ಮೌಲ್ಯಯುತವಾಗಿದ್ದು ಓದುಗರ ಮನಮುಟ್ಟುಂತಿವೆ. ಕನ್ನಡಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಘೋಷಿಸಿದ್ದ ಇದಿನಬ್ಬ ಕನ್ನಡ, ಕನ್ನಡ ಸಾಹಿತ್ಯದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ.

1920ರ ಸೆಪ್ಟೆಂಬರ್ 17ರಂದು ಅವರು ಜನಿಸಿದ್ದ ಇದಿನಬ್ಬ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಗೆದ್ದರೆ ಬಡವರ ಓಟಿನಿಂದ, ಸೋತರೆ ಶ್ರೀಮಂತರ ನೋಟಿನಿಂದ'
ಚುನಾವಣೆ ಬಳಿಕ ಬಿಜೆಪಿಯ ತಿಥಿಯಾಗುತ್ತೆ: ಸಿದ್ದು
ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಪಕ್ಷೇತರರಿಗೆ ಭಯವಿಲ್ಲ: ನರೇಂದ್ರಸ್ವಾಮಿ
ಖರ್ಗೆ ರಾಜೀನಾಮೆ: ಸಿದ್ದು ಹಾದಿ ಸುಗಮ
ಸೂಕ್ತ ಸಮಯದಲ್ಲಿ ಬಿಜೆಪಿಗೆ ಸೂಕ್ತ ಉತ್ತರ: ಡಿಕೆಶಿ