ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಜೆಪಿಗೆ ಗುಜರಾತ್‌ನಿಂದ ಮದ್ಯ ಪೂರೈಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಗೆ ಗುಜರಾತ್‌ನಿಂದ ಮದ್ಯ ಪೂರೈಕೆ
ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ರಾಜ್ಯ ಬಿಜೆಪಿಯು ಆ ಪಕ್ಷದ ಸರ್ಕಾರವಿರುವ ಗುಜರಾತ್‌ನಿಂದ ವ್ಯಾಪಕ ಪ್ರಮಾಣದಲ್ಲಿ ಮದ್ಯವನ್ನು ಅಕ್ರಮವಾಗಿ ತರಿಸಿಕೊಂಡು ಹಂಚುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ರಾಘವೇಂದ್ರ ಸ್ಪರ್ಧಿಸಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಗ್ರಾಮದಲ್ಲಿ ದೊರೆತಿರುವ ಬೃಹತ್ ಪ್ರಮಾಣದ ಮದ್ಯದ ಸೀಸೆಗಳ ಮೇಲೆ 'ಬಾಸ್' ಎಂಬ ಕಂಪೆನಿಯ ಹೆಸರು ಮುದ್ರಿತವಾಗಿದೆ. ಆ ಕಂಪೆನಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿರುವ ಗುಜರಾತ್ ರಾಜ್ಯದ್ದಾಗಿದೆ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಹಾಗೂ ವಕ್ತಾರ ಡಾ.ಎಲ್.ಹನುಮಂತಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ಚಕ್ರದ ಹಾಗೂ 40 ಟನ್ ಸಾಮರ್ಥ್ಯವಿರುವ ಬೃಹತ್ ಲಾರಿಯಲ್ಲಿ ಮದ್ಯ ಬಂದಿದೆ. ಉಳವಿಯಲ್ಲಿ ಸಚಿವ ಹಾಲಪ್ಪ ಬಿಜೆಪಿ ಕಾರ್ಯಕರ್ತನ ನಿವಾಸದಲ್ಲಿ ಮದ್ಯದ ಸೀಸೆಗಳ ನಡುವೆ ಕುಳಿತಿದ್ದರು ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರು ಪತ್ತೆ ಹಚ್ಚಿರುವುದೇ ಸಾಕ್ಷಿ ಎಂದರು.

ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ರಾಜ್ಯದ ಬಿಜೆಪಿ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ವ್ಯಾಪಕ ಚುನಾವಣಾ ಅಕ್ರಮದಲ್ಲಿ ನಿರತವಾಗಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವುದೇ ಅನುಮಾನವಾಗಿದೆ ಎಂದು ಅವರು ನುಡಿದರು.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್‌ಗೆ ಟಾಟಾ ಹೇಳಿದ ಯು.ಆರ್. ಸಭಾಪತಿ
ಸಾಹಿತಿ, ಹೋರಾಟಗಾರ ಬಿ.ಎಂ. ಇದಿನಬ್ಬ ವಿಧಿವಶ
'ಗೆದ್ದರೆ ಬಡವರ ಓಟಿನಿಂದ, ಸೋತರೆ ಶ್ರೀಮಂತರ ನೋಟಿನಿಂದ'
ಚುನಾವಣೆ ಬಳಿಕ ಬಿಜೆಪಿಯ ತಿಥಿಯಾಗುತ್ತೆ: ಸಿದ್ದು
ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಪಕ್ಷೇತರರಿಗೆ ಭಯವಿಲ್ಲ: ನರೇಂದ್ರಸ್ವಾಮಿ