ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಳ್ಳಾರಿ ಗಣಿಧಣಿಗಳು ಹೆದರಿಸುತ್ತಿದ್ದಾರೆ: ಗೌಡ್ರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಳ್ಳಾರಿ ಗಣಿಧಣಿಗಳು ಹೆದರಿಸುತ್ತಿದ್ದಾರೆ: ಗೌಡ್ರು
ಮಾತೆತ್ತಿದರೆ ಜೆಡಿಎಸ್ ಸತ್ತಿದೆ, ಅಂತ್ಯ ಸಂಸ್ಕಾರ ಮಾಡ್ತೇವೆ, ತಿಥಿ ಮಾಡ್ತೇವೆ ಎಂದು ಹೆದರಿಸುವ ಬಳ್ಳಾರಿ ಗಣಿಧಣಿಗಳನ್ನು ಕಂಡು ಭಯವಾಗಿದೆ. ಇಂತವರ ವಿರುದ್ಧ ಪಕ್ಷದ ಅಭ್ಯರ್ಥಿಗಳ ಪಾಡೇನು? ಈ ಹಿನ್ನೆಲೆಯಲ್ಲಿ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ತಮ್ಮ ಸಾಧನೆಗಳ ಜಪ ಸಾಕಾಗಿ ಮುಂದೇನು ಎಂದು ತೋಚದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಕ್ಷುಲಕ ಆರೋಪ ಮಾಡುವವರ ಬಗ್ಗೆ ನಾನೇನು ಪ್ರತಿಕ್ರಿಯಿಸಲಿ ಎಂದ ಮಾಜಿ ಪ್ರಧಾನಿ, ಬಳ್ಳಾರಿಯಲ್ಲಿ ನಿತ್ಯ ದೊರೆಯುತ್ತಿರುವ ಅಕ್ರಮ ಹಣದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ದೇಶದ ಖನಿಜ ಸಂಪತ್ತನ್ನು ಅವ್ಯಾಹತವಾಗಿ ಲೂಟಿ ಮಾಡುತ್ತಿರುವ ಗಣಿಧಣಿಗಳ ಹಣದ ಮದ ಇಂತಹ ದುರಹಂಕಾರದ ಮಾತುಗಳನ್ನಾಡಿಸುತ್ತಿದೆ. ಇದನ್ನೇ ಒಳ ಒಪ್ಪಂದ ಎನ್ನುವುದಾದರೆ ನಾನೇನು ಮಾಡಲು ಸಾಧ್ ಎಂದರು.

ಹಿಂದೆ ಮೌಲ್ಯಾಧಾರಿತ ರಾಜಕಾರಣ ಇತ್ತು. ಈಗ ಆ ಸ್ಥಾನವನ್ನು ಮೌಲ್ಯ ಅಕ್ರಮಿಸಿಕೊಂಡಿದೆ. ರಾಜಕೀಯ ಹಣ ಕಾಸಿನಿಂದ ಪ್ರಬಲವಾಗಿರುವ ವ್ಯಕ್ತಿಗೆ ಮಾತ್ರ ಸೂಕ್ತ ಎನ್ನುವ ವ್ಯವಸ್ಥೆಯಲ್ಲಿ ನಾವಿರುವುದರಿಂದ, ರಾಜ್ಯದ 28 ಕ್ಷೇತ್ರಗಳಿಗೂ ಪಕ್ಷದ ಅಭ್ಯರ್ಥಿಗಳನ್ನು ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರ ರಚಿಸಲು ಸಾಧ್ಯವಿಲ್ಲ. ಮತದಾರರು ತೃತೀಯ ರಂಗದ ಕಡೆಗೆ ಒಲವು ತೋರುತ್ತಿದ್ದಾರೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಕ್ಕಳ ದುರ್ಬಳಕೆ: ಅನಂತ್ ವಿರುದ್ಧ ಕ್ರಮಕ್ಕೆ ಆಗ್ರಹ
ಎ.15ಕ್ಕೆ ರಾಜ್ಯದಲ್ಲಿ ಸೋನಿಯಾ ಪ್ರಚಾರ
ಅಧಿಕಾರ ಕೊಟ್ಟರೆ ಸಂತೋಷವಾಗುತ್ತೆ: ಸೋಮಣ್ಣ
ಕುಮಾರಸ್ವಾಮಿ ರೋಡ್ ಶೋ
ಕೋಮಘರ್ಷಣೆ: 10 ಮಂದಿ ಬಂಧನ
ಕಾಂಗ್ರೆಸ್ ಪರ ಸಿಂಧ್ಯಾರಿಂದ ಪ್ರಚಾರ