ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿಂಗ್ ದುರ್ಬಲ ಪ್ರಧಾನಿಯಲ್ಲ: ಎಸ್.ಎಂ. ಕೃಷ್ಣ ಸ್ಪಷ್ಟೋಕ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗ್ ದುರ್ಬಲ ಪ್ರಧಾನಿಯಲ್ಲ: ಎಸ್.ಎಂ. ಕೃಷ್ಣ ಸ್ಪಷ್ಟೋಕ್ತಿ
ಕೇಂದ್ರದಲ್ಲಿ ಐದು ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಸರ್ಕಾರವನ್ನು ಮುನ್ನಡೆಸಿದ ಡಾ. ಮನಮೋಹನ್ ಸಿಂಗ್ ದುರ್ಬಲ ಪ್ರಧಾನಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಮನಮೋಹನ್ ಸಿಂಗ್ ಅವರು ಈ ದೇಶ ಕಂಡ ಸಮರ್ಥ ನಾಯಕ ಹಾಗೂ ಆದರ್ಶ ವ್ಯಕ್ತಿತ್ವವುಳ್ಳವರು ಎಂದು ಅವರು ಇದೇ ಸಂದರ್ಭದಲ್ಲಿ ಬಣ್ಣಿಸಿದ್ದಾರೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ತ್ರಗಳು ತಲ್ಲಣಗೊಂಡಿದ್ದರೂ ಭಾರತ ಮಾತ್ರ ಸದೃಢವಾಗಿ ಉಳಿಯಲು ಡಾ. ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿ ಹಾಗೂ ಕಾರ್ಯದಕ್ಷತೆ ಕಾರಣ ಎಂದರು.

ಡಿ.ಬಿ. ಚಂದ್ರೇಗೌಡ ಪಕ್ಷಾಂತರ ಮಾಡಿ ಬಿಜೆಪಿಗೆ ಸೇರಿ ಅಭ್ಯರ್ಥಿಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಕಾಂಗ್ರೆಸ್‌ನಲ್ಲಿ ಉಸಿರುಗಟ್ಟುವ ವಾತಾವರಣವಿತ್ತು ಎಂದು ಚಂದ್ರೇಗೌಡರು ಹೇಳಿದ್ದಾರೆ. ಪಾಪ, ಅವರಿಗೆ ಕೊನೇ ಕ್ಷಣದಲ್ಲಿ ಜ್ಞಾನೋದಯವಾಯಿತು" ಎಂದು ವ್ಯಂಗ್ಯವಾಡಿದರು.

ಮಾಜಿ ಸಚಿವ ವಿ. ಸೋಮಣ್ಣ ಅವರ ಬಿಜೆಪಿ ಸೇರ್ಪಡೆ ಕುರಿತು, "ಆಪರೇಷನ್ ಕಮಲ ಎಂದು ಶಾಸಕರನ್ನು ಸೆಳೆಯುತ್ತಿರುವುದು ಅಸಹ್ಯ ಪ್ರವೃತ್ತಿ. ನನ್ನ ರಾಜಕೀಯ ಜೀವನದಲ್ಲಿ ಇಂತಹ ರಾಜಕಾರಣ ನೋಡುತ್ತಿರುವುದು ದುರ್ದೈವದ ಸಂಗತಿ" ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಚಾರಕ್ಕೆ ಸಿಎಂ ಆಹ್ವಾನಿಸಿಲ್ಲ: ವರ್ತೂರು
ದಾವಣಗೆರೆ ಬಿಜೆಪಿ ಅಭ್ಯರ್ಥಿ ನಾಮಪತ್ರ ಅಂಗೀಕಾರ
ಖರ್ಗೆ ರಾಜೀನಾಮೆ ನನಗೆ ತಿಳಿದಿಲ್ಲ: ದೇಶಪಾಂಡೆ
ಬಳ್ಳಾರಿ ಗಣಿಧಣಿಗಳು ಹೆದರಿಸುತ್ತಿದ್ದಾರೆ: ಗೌಡ್ರು
ಮಕ್ಕಳ ದುರ್ಬಳಕೆ: ಅನಂತ್ ವಿರುದ್ಧ ಕ್ರಮಕ್ಕೆ ಆಗ್ರಹ
ಎ.15ಕ್ಕೆ ರಾಜ್ಯದಲ್ಲಿ ಸೋನಿಯಾ ಪ್ರಚಾರ