ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕತ್ತರಿಸುವವರು, ಚಚ್ಚುವವರನ್ನು ದೂರವಿಡಿ: ಸಾಹಿತಿಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕತ್ತರಿಸುವವರು, ಚಚ್ಚುವವರನ್ನು ದೂರವಿಡಿ: ಸಾಹಿತಿಗಳು
ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕಡಿ, ಕೊಚ್ಚು, ಕೊಲ್ಲು ಎಂದು ಸಾಂವಿಧಾನಿಕ ಪ್ರಜಾಪ್ರಭುತ್ವ ಹಾಗೂ ನಾಗರಿಕ ಸಮಾಜದ ಸಭ್ಯತೆಗೆ ವಿರುದ್ಧವಾಗಿ ಮಾತನಾಡುತ್ತಿರುವ ಕೆಲವು ರಾಜಕಾರಣಿಗಳನ್ನು ಚುನಾವಣೆಯಿಂದ ದೂರವಿಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕದ ಸಾಹಿತಿ ಹಾಗೂ ಕಲಾವಿದರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಸಾಹಿತಿಗಳಾದ ಡಾ| ಯು.ಆರ್. ಅನಂತ ಮೂರ್ತಿ, ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ್ ಪಾಟೀಲ, ಕೋ. ಚೆನ್ನಬಸಪ್ಪ, ಡಿ.ಕೆ. ಚೌಟ ಸೇರಿದಂತೆ ರಾಜ್ಯದ ಅನೇಕ ಸಾಹಿತಿ ಪ್ರಮುಖರ ಬಳಗ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ, ಭಿನ್ನಾಭಿಪ್ರಾಯಗಳ ಮಂಡನೆ, ಚರ್ಚೆ, ಸಂವಾದ ಅಗತ್ಯ. ಆಷದರೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೆಲವು ರಾಜಕಾರಣಿಗಳ ಮಾತು ಚುನಾವಣೆ ಸಾಂವಿಧಾನಿಕ ಉತ್ತರದಾಯಿತ್ವವನ್ನು ನಾಶ ಮಾಡುತ್ತವೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಇಬ್ಬರು ವ್ಯಕ್ತಿಗಳು ಪರಸ್ಪರ ಅವಾಚ್ಯ ಶಬ್ದಗಳನ್ನು ಬಳಸಿ ಬೈಯ್ದಾಡುವುದು ಆ ಇಬ್ಬರ ಸಮಸ್ಯೆಯಾಗಿ ಉಳಿಯುವುದಿಲ್ಲ. ಬದಲಾಗಿ ಇದು ಕೇಳಿಸಿಕೊಳ್ಳುವವರ ಮೇಲೂ ಪ್ರಭಾವ ಬೀರುತ್ತದೆ. ಆದ್ದರಿಂದ ಇಂತಹ ಭಾಷೆಯನ್ನು ಬಳಸುತ್ತಿರುವವರನ್ನು ಚುನಾವಣೆಯಿಂದ ದೂರ ಇಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಅಲ್ಲದೇ ಇದರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೆ ಕಾನೂನಿಗೆ ಸೂಕ್ತ ತಿದ್ದುಪಡಿ ತರಲು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇಶವನ್ನಾಳಿದ ಕಾಂಗ್ರೆಸ್ ಭಸ್ಮಾಸುರ ಪಕ್ಷ: ಶೃತಿ
ಸಿಂಗ್ ದುರ್ಬಲ ಪ್ರಧಾನಿಯಲ್ಲ: ಎಸ್.ಎಂ. ಕೃಷ್ಣ ಸ್ಪಷ್ಟೋಕ್ತಿ
ಪ್ರಚಾರಕ್ಕೆ ಸಿಎಂ ಆಹ್ವಾನಿಸಿಲ್ಲ: ವರ್ತೂರು
ದಾವಣಗೆರೆ ಬಿಜೆಪಿ ಅಭ್ಯರ್ಥಿ ನಾಮಪತ್ರ ಅಂಗೀಕಾರ
ಖರ್ಗೆ ರಾಜೀನಾಮೆ ನನಗೆ ತಿಳಿದಿಲ್ಲ: ದೇಶಪಾಂಡೆ
ಬಳ್ಳಾರಿ ಗಣಿಧಣಿಗಳು ಹೆದರಿಸುತ್ತಿದ್ದಾರೆ: ಗೌಡ್ರು