ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಯುಪಿಎ ತಾರತಮ್ಯ: ಬಿಜೆಪಿಯಿಂದ 14 ಅಂಶಗಳ ಪಟ್ಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎ ತಾರತಮ್ಯ: ಬಿಜೆಪಿಯಿಂದ 14 ಅಂಶಗಳ ಪಟ್ಟಿ
ರಾಜ್ಯದ ಕುರಿತು ಕೇಂದ್ರದ ಯುಪಿಎ ಸರ್ಕಾರ ಅನುಸರಿಸಿರುವ ತಾರತಮ್ಯ ನೀತಿಯ ಕುರಿತು ದೂರಿರುವ ಬಿಜೆಪಿಯು ಈ ಕುರಿತು 14 ಅಂಶಗಳ ಆರೋಪಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬಿಜೆಪಿ ಪಟ್ಟಿಮಾಡಿರುವ ಅಂಶಗಳು ಇಂತಿವೆ:
* ಹೈದರಾಬಾದ್ , ಮುಂಬೈ, ಕೋಲ್ಕತಾ ಚೆನ್ನೈ‌ಗೆ ರಾಷ್ಟ್ರೀಯ ಭದ್ರತಾ ಪಡೆಯ(ಎನ್ಎಸ್‌‍ಜಿ) ಘಟಕಗಳನ್ನು ಮಂಜೂರು ಮಾಡಿದ್ದರೆ, ಬೆಂಗಳೂರಿಗೆ ಮಾಡಿಲ್ಲ.

* ಹೈದರಾಬಾದ್ ಕರ್ನಾಟಕ ಭಾಗವನ್ನು ಸಂವಿಧಾನದ 371ನೆ ವಿಧಿಯಡಿ ಸೇರಿಸಿಲ್ಲ. ಈ ಕುರಿತ ಮನವಿಯನ್ನೂ ಕೇಂದ್ರ ಪರಿಗಣಿಸಿಲ್ಲ.

* ಆಂಧ್ರ ಪ್ರದೇಶಕ್ಕೆ ಶೇ.32 ಹಾಗೂ ತಮಿಳ್ನಾಡಿಗೆ ಶೇ.34ರಷ್ಟು ವಿದ್ಯುತ್ ಪೂರೈಕೆ ಮಾಡಿದ್ದರೆ, ಕರ್ನಾಟಕಕ್ಕೆ ಕೊಟ್ಟದ್ದು ಕೇವಲ ಶೇ 17ರಷ್ಟು ಮಾತ್ರ.

* ಪ್ರಕೃತಿ ವಿಕೋಪ ನಿಧಿಯಲ್ಲಿ ಆಂಧ್ರಪ್ರದೇಶಕ್ಕೆ ರೂ.398.32 ಕೋಟಿ ತಮಿಳ್ನಾಡಿಗೆ 242 ಕೋಟಿ ನೀಡಲಾಗಿದ್ದರೆ, ರಾಜ್ಯಕ್ಕೆ ಧಕ್ಕಿದ್ದು ಬರಿಯ 132 ಕೋಟಿ ರೂಪಾಯಿ.
* ರಾಜ್ಯಕ್ಕೆ ರಸಗೊಬ್ಬರ ಪೂರೈಸುವಲ್ಲಿಯೂ ಕೇಂದ್ರ ವಿಫಲವಾಗಿದೆ. ಇದರಿಂದಾಗಿ ರೈತರ ಆತ್ಮಹತ್ಯೆಗೆ ಕೇಂದ್ರ ಸರ್ಕಾರವೇ ಹೊಣೆ.

* ರಾಜ್ಯದ ರೈಲ್ವೆ ಯೋಜನೆಗಳಿಗೂ ಸರಿಯಾಗಿ ಹಣನೀಡಿಲ್. ಈ ಬಾರಿ ಕನಿಷ್ಠ 10 ಯೋಜನೆಗಳಿಗೆ ಮಂಜೂರಾತಿ ನೀಡುವಂತೆ ಕೋರಿದ್ದರೂ ಪರಿಗಣಿಸಿಲ್ಲ.

* ಬೀದರ್‌ನ ವಾಯುಪಚಿ ವಿಮಾನ ನಿಲ್ದಾಣವನ್ನು ನಾಗರಿಕ ವಿಮಾನ ಯಾನ ಸೇವೆ ಆರಂಭಿಸಲು ಇನ್ನೂ ಅನುಮತಿ ನೀಡಿಲ್ಲ.

* ವಿವಿಧ ಅಭಿವೃದ್ಧಿ ಯೋಜನೆಗಳ ಸಲುವಾಗಿ ಆಂಧ್ರಪ್ರದೇಶಕ್ಕೆ ರೂ. 24,954 ಕೋಟಿ ನೀಡಿದೆಯ ಆದರೆ, ರಾಜ್ಯಕ್ಕೆ ಬರಿಯ 6,426 ಕೋಟಿ ಮಾತ್ರ.

* ಕೃಷಿ ಸಾಲ ಮತ್ತು ಸಾಲಮನ್ನಾ ಯೋಜನೆಗಳಡಿಯೂ ತಾರತಮ್ಯ ಎಸಗಲಾಗಿದೆ. ಆಂಧ್ರ ಪ್ರದೇಶಕ್ಕೆ ರೂ. 2,444 ಕೋಟಿ ಅನುದಾನ ನೀಡಲಾಗಿದೆ. ಆದರೆ, ಕರ್ನಾಟಕಕ್ಕೆ ಕೊಟ್ಟದ್ದು ಕೇವಲ 607 ಕೋಟಿ.

* ನೀರಾವರಿ ಯೋಜನೆಗಳಿಗಾಗಿ ಆಂಧ್ರಕ್ಕೆ 1,959 ಕೋಟಿ, ಮಹಾರಾಷ್ಟ್ರಕ್ಕೆ 1,170 ಕೋಟಿ ನೀಡಿದ್ದರೆ ರಾಜ್ಯಕ್ಕೆ ಲಭಿಸಿದ್ದು 323 ಕೋಟಿ ಮಾತ್ರ

* ಕರ್ನಾಟಕ ಮತ್ತು ಆಂಧ್ರಗಳ ನಡುವೆ ಇರುವ ಅಂತಾರಾಜ್ಯ ಗಡಿಯನ್ನು ಜಂಟಿ ಭೂಮಾಪನ ಮಾಡಲು ಕೇಂದ್ರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ.

* ಕನ್ನಡಕ್ಕೆ ಶಾಸ್ತ್ರೀಯ ಭಾಷೆಸ್ಥಾನ ನೀಡಲು ಕೇಂದ್ರ ಒಪ್ಪಿದರೂ ಅದಕ್ಕೆ ಬೇಕಾದ ಸೌಲಭ್ಯಗಳು ಇನ್ನೂ ಲಭಿಸಿಲ್ಲ.

* ಬೆಂಗಳೂ ಮಹಾನಗರದ ಮೂಲಸೌಕರ್ಯ ಅಭಿವೃದ್ಧಿಗೆ 5000 ಕೋಟಿ ಪ್ಯಾಕೇಜ್ ಕೇಳಿದ್ದರೂ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಚೆನ್ನೈ, ಹೈದರಾಬಾದ್ ನಗರಗಳಿಗೆ ಹೆಚ್ಚಿನ ಹಣ ನೀಡಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿಯಿಂದ ಸಮಾಜದಲ್ಲಿ ಅಶಾಂತಿ: ಜಿ. ಪರಮೇಶ್ವರ್
ಲೋಕಾಯುಕ್ತ ದುರುಪಯೋಗ ಯತ್ನ: ಹೆಗ್ಡೆ ಅಸಮಾಧಾನ
ಕತ್ತರಿಸುವವರು, ಚಚ್ಚುವವರನ್ನು ದೂರವಿಡಿ: ಸಾಹಿತಿಗಳು
ದೇಶವನ್ನಾಳಿದ ಕಾಂಗ್ರೆಸ್ ಭಸ್ಮಾಸುರ ಪಕ್ಷ: ಶೃತಿ
ಸಿಂಗ್ ದುರ್ಬಲ ಪ್ರಧಾನಿಯಲ್ಲ: ಎಸ್.ಎಂ. ಕೃಷ್ಣ ಸ್ಪಷ್ಟೋಕ್ತಿ
ಪ್ರಚಾರಕ್ಕೆ ಸಿಎಂ ಆಹ್ವಾನಿಸಿಲ್ಲ: ವರ್ತೂರು