ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಕ್ಷ ಬಿಡಲ್ಲ ಜೆಡಿಎಸ್ ಸೇರಲ್ಲ: ಪ್ರಕಾಶ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಕ್ಷ ಬಿಡಲ್ಲ ಜೆಡಿಎಸ್ ಸೇರಲ್ಲ: ಪ್ರಕಾಶ್
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದು ಪಕ್ಷ ಬಿಡುವ ಯಾವ ಆಲೋಚನೆಯನ್ನು ತಾವು ಮಾಡಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಹೇಳಿದ್ದಾರೆ. ಈ ಮೂಲಕ ಜೆಡಿಎಸ್ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ತೊರೆದು ಜಾತ್ಯಾತೀತ ಜನತಾದಳ ಸೇರುವುದಾಗಿ ಪ್ರಕಟವಾಗಿರುವ ವರದಿಯನ್ನು ತಳ್ಳಿ ಹಾಕಿರುವ ಅವರು, ಇದೊಂದು ಸುಳ್ಳು ಸುದ್ದಿ. ನನಗೆ ಕೇಡು ಬಯಸುವ ವ್ಯಕ್ತಿಗಳು ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಜೆಡಿಎಸ್ ಸೇರುವ ಬಗ್ಗೆ ಯಾವತ್ತೂ ಯೋಚಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ರಾಜ್ಯವ್ಯಾಪ್ತಿ ಹಲವು ಹಿರಿಯ ನಾಯಕರೊಂದಿಗೆ ಪ್ರಚಾರ ಮಾಡುತ್ತಿರುವುದಾಗಿ ತಿಳಿಸಿದ ಅವರು, ಹಾವೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಶ್ರಮಿಸುತ್ತಿದ್ದು, ಗೆಲುವು ನಮ್ಮದೇ ಎಂದಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಡ್ವಾಣಿ ಆರೆಸ್ಸೆಸ್ ಕೈಗೊಂಬೆ: ಸೋನಿಯಾ ಟೀಕೆ
ನಾನು ಬಿಜೆಪಿಯಿಂದ ಕಲಿಯಬೇಕಿಲ್ಲ: ಮಾರ್ಗರೆಟ್
ಗಣಿಲಂಚ ಸಾಬೀತಾದರೆ ಗಲ್ಲಿಗೇರಿಸಿ: ಕುಮಾರಸ್ವಾಮಿ
ಸಿಎಂ, ಗೃಹಸಚಿವರ ರಾಜೀನಾಮೆಗೆ ಒತ್ತಾಯ
ಪ್ರಧಾನಿ-ಅಡ್ವಾಣಿಗೆ ತೃತೀಯರಂಗದ ಭಯ: ಗೌಡ
ಯುಪಿಎ ತಾರತಮ್ಯ: ಬಿಜೆಪಿಯಿಂದ 14 ಅಂಶಗಳ ಪಟ್ಟಿ