ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಕಲಿ ಛಾಪಾಕಾಗದ: ರೋಶನ್ ಬೇಗ್ ದೋಷ ಮುಕ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕಲಿ ಛಾಪಾಕಾಗದ: ರೋಶನ್ ಬೇಗ್ ದೋಷ ಮುಕ್ತಿ
ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದಲ್ಲಿ ಮಾಜಿ ಸಚಿವ ರೋಶನ್ ಬೇಗ್ ಅವರನ್ನು ಖುಲಾಸೆ ಮಾಡಲಾಗಿದೆ. ಇದೇವೇಳೆ, ಮಾಜಿ ಪೊಲೀಸ್ ಅಧಿಕಾರಿ ಟಿ.ಜಿ. ಸಂಗ್ರಾಮ್ ಸಿಂಗ್ ಮತ್ತು ತೆಲಗಿ ಸೇರಿದಂತೆ ಇತರ ಒಂಬತ್ತು ಆರೋಪಿಗಳನ್ನು ತಪ್ಪಿತಸ್ಥರೆಂದು ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಹನ್ನೆರಡು ಆರೋಪಿಗಳಲ್ಲಿ ಮೂವರನ್ನು ನ್ಯಾಯಾಲಯ ಖುಲಾಸೆ ಮಾಡಿದೆ.

ಈ ಪ್ರಕರಣದಲ್ಲಿ ಒಟ್ಟು ಅಬ್ದುಲ್ ಕರೀಂ ತೆಲಗಿ ಸೇರಿದಂತೆ 12 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಇವರಲ್ಲಿ ರೇಹನ್ ಬೇಗ್, ರೋಶನ್ ಬೇಗ್ ಮತ್ತು ವಿ.ಎ. ಖಾನ್‌ರನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣ ಬಿಡುಗಡೆ ಮಾಡಲಾಗಿದೆ.

ಆದರೆ, ಸಂಗ್ರಾಮ್ ಸಿಂಗ್ ವಿರುದ್ಧ ಆರೋಪ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ನಾಳೆ ಪ್ರಕಟವಾಗಲಿದೆ. ಸಂಗ್ರಾಮ್ ಸಿಂಗ್ ವಿರುದ್ಧ ತಪ್ಪು ಮಾಹಿತಿ ನೀಡಿದ ಮತ್ತು ಸಾಕ್ಷಿ ತಿರುಚಿದ ಆರೋಪಗಳನ್ನು ಹೊರಿಸಲಾಗಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಕ್ಷ ಬಿಡಲ್ಲ ಜೆಡಿಎಸ್ ಸೇರಲ್ಲ: ಪ್ರಕಾಶ್
ಆಡ್ವಾಣಿ ಆರೆಸ್ಸೆಸ್ ಕೈಗೊಂಬೆ: ಸೋನಿಯಾ ಟೀಕೆ
ನಾನು ಬಿಜೆಪಿಯಿಂದ ಕಲಿಯಬೇಕಿಲ್ಲ: ಮಾರ್ಗರೆಟ್
ಗಣಿಲಂಚ ಸಾಬೀತಾದರೆ ಗಲ್ಲಿಗೇರಿಸಿ: ಕುಮಾರಸ್ವಾಮಿ
ಸಿಎಂ, ಗೃಹಸಚಿವರ ರಾಜೀನಾಮೆಗೆ ಒತ್ತಾಯ
ಪ್ರಧಾನಿ-ಅಡ್ವಾಣಿಗೆ ತೃತೀಯರಂಗದ ಭಯ: ಗೌಡ