ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಾಸನ, ಬೀದರ್, ಗುಲ್ಬರ್ಗ ಸೂಕ್ಷ್ಮವೆಂದು ಘೋಷಿಸಿ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಾಸನ, ಬೀದರ್, ಗುಲ್ಬರ್ಗ ಸೂಕ್ಷ್ಮವೆಂದು ಘೋಷಿಸಿ: ಸಿಎಂ
ಮಾಜಿ ಪ್ರಧಾನಿ ದೇವೇಗೌಡರು ಸ್ಫರ್ಧಿಸುತ್ತಿರುವ ಹಾಸನ ಹಾಗೂ ಬೀದರ್, ಗುಲ್ಬರ್ಗಾಗಳನ್ನೂ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಬೇಕು ಎಂದು ಮುಖ್ಯಮಂತ್ರಿ ಯುಡಿಯೂರಪ್ಪ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಹಾಸನ, ಗುಲ್ಬರ್ಗಾ ಹಾಗೂ ಬೀದರ್‌ಗಳಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಯುತ್ತದೆ ಎಂಬ ನಂಬುಗೆ ಇಲ್ಲದ ಕಾರಣ ಈ ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಬೇಕು ಎಂದು ಹೇಳಿದ್ದಾರೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಒಳಒಪ್ಪಂದ ಮಾಡಿಕೊಂಡಿವೆ ಎಂದು ದೂರಿದ ಅವರು ದಾವಣಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣದಿಂದ ಹಿಂತೆಗೆಸಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ ಎಂದು ಹೇಳಿದ್ದಾರೆ.

ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸ್ಫರ್ಧಿಸುತ್ತಿದ್ದರೆ, ಕಾಂಗ್ರೆಸ್ ಘಟಾನುಘಟಿಗಳಾದ ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುವ ಖರ್ಗೆ ಅವರುಗಳು ಅನುಕ್ರಮವಾಗಿ ಬೀದರ್‌ ಹಾಗೂ ಗುಲ್ಬರ್ಗಾಗಳಿಂದ ಸ್ಫರ್ಧಿಸುತ್ತಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ಬಡವರಿಂದ ಬಹುದೂರ ಸಾಗಿದೆ: ರಾಹುಲ್ ಗಾಂಧಿ
ಛಾಪಕೂಪ: ಸಂಗ್ರಾಮ್‌ಗೆ 3ವರ್ಷಗಳ ಕಠಿಣ ಶಿಕ್ಷೆ
ಬಿಜೆಪಿ ಒಂದೂ ಭರವಸೆಯನ್ನು ಈಡೇರಿಸಿಲ್ಲ: ದೇವೇಗೌಡ
ಅಭಿವೃದ್ಧಿಯಾಗದಿದ್ದರೆ ನಿವೃತ್ತಿ ಹೊಂದುವೆ: ಸಿಎಂ
ಚುನಾವಣಾ ಆಯೋಗ ಬಿಜೆಪಿ ಕೈಗೊಂಬೆ: ಬಂಗಾರಪ್ಪ
ಖರ್ಗೆ ತನಗೆ ರಾಜೀನಾಮೆ ಸಲ್ಲಿಸಿಲ್ಲ: ದೇಶಪಾಂಡೆ