ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ತೃತೀಯ ರಂಗಕ್ಕೆ ಅಧಿಕಾರ ನಿಶ್ಚಿತ: ದೇವೇಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೃತೀಯ ರಂಗಕ್ಕೆ ಅಧಿಕಾರ ನಿಶ್ಚಿತ: ದೇವೇಗೌಡ
ತೃತೀಯ ರಂಗ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಭವಿಷ್ಯ ನುಡಿದಿದ್ದಾರೆ. ಈ ಸುಳಿವು ಸಿಕ್ಕ ನಂತರವೇ ಕಾಂಗ್ರೆಸ್ ಮತ್ತು ಬಿಜೆಪಿ ಬೀದಿ ಕಾಳಗಕ್ಕಿಳಿದು ಪ್ರಧಾನಿ ಹುದ್ದೆಯ ಘನತೆಯನ್ನು ಮಣ್ಣು ಪಾಲು ಮಾಡಿವೆ. ಈ ಪಕ್ಷಗಳ ನಾಯಕರು ಕೀಳು ಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ ಎಂದು ಅವರು ವಿಷಾದಿಸಿದರು.

ತೃತೀಯ ರಂಗ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಯುಪಿಎ ಮತ್ತಯ ಎನ್‌‌ಡಿಎ ಮಿತ್ರಪಕ್ಷಗಳು ಜಾಗ ಖಾಲಿ ಮಾಡುತ್ತಿವೆ. ಅಧಿಕಾರ ಕೈ ತಪ್ಪುವ ಆತಂಕದಿಂದ ಮನಮೋಹನ್ ಸಿಂಗ್ ಮತ್ತು ಆಡ್ವಾಣಿ ಅವರನ್ನು ಆರ್ಎಸ್ಎಸ್ ಗುಲಾಮ ಎಂದು ನಿಂದಿಸುವ ಮಟ್ಟಕ್ಕೆ ಸೋನಿಯಾ ಗಾಂಧಿ ಇಳಿಯಬಾರದಿತ್ತು ಎಂದರು.

ತೃತೀಯ ರಂಗ ಅಧಿಕಾರಕ್ಕೆ ಬರುತ್ತದೆ ಎಂದೇ ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ನಾನು ಆಕಾಂಕ್ಷಿಯಲ್ಲ. ಮಾಯಾವತಿಯಾಗಲಿ ಅವರಿಗೆ ಆನಂದದಿಂದ ಬೆಂಬಲ ನೀಡುತ್ತೇವೆ. ಅಧಿಕಾರಕ್ಕಿಂತ ಪ್ರಣಾಳಿಕೆಯಲ್ಲಿರುವ ಕಾರ್ಯಕ್ರಮಗಳ ಅನುಷ್ಠಾನ ನಮಗೆ ಮುಖ್ಯ ಎಂದರು.

ಚುನಾವಣೆ ನಂತರ ಜಾತ್ಯತೀತ ನಿಲುವಿನ ಯಾರು ಬೇಕಾದರೂ ಪ್ರಧಾನಿ ಆಗಲು ಬೆಂಬಲ ನೀಡುತ್ತೇನೆ. ಆದರೆ, ಪ್ರಣಾಳಿಕೆಯಲ್ಲಿನ ಅಂಶಗಳ ಅನುಷ್ಠಾನಕ್ಕೆ ಒತ್ತಡ ಹೇರುವ ಸ್ವಾತಂತ್ರ್ಯ ಉಳಿಸಿಕೊಳ್ಳುತ್ತೇನೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಡ್ವಾಣಿ ಪ್ರಧಾನಿಯಾದ್ರೆ ಚರ್ಚ್,ಮಸೀದಿ ಉಳಿಯಲ್ಲ: ಬಂಗಾರಪ್ಪ
ಅಧಿಕಾರಕ್ಕೆ ಬಂದ್ರೆ ಬಜರಂಗದಳ ನಿಷೇಧ: ದೇವೇಗೌಡ
ಜೆಡಿಎಸ್‌ನ ಡಿ.ಟಿ.ಜಯಕುಮಾರ್ ಬಿಜೆಪಿ ತೆಕ್ಕೆಗೆ
ನೌಶಾದ್ ಹತ್ಯೆಯ ಹಿಂದೆ ದಾವೂದ್ ಕೈವಾಡ: ಆಚಾರ್ಯ
ಪ್ರಧಾನಿ ಸಿಂಗ್ ಸೋನಿಯಾ ಗುಲಾಮ: ಬಿಜೆಪಿ
ರಾಜ್ಯದಲ್ಲಿ ಬಿಜೆಪಿ ನೆಲೆಯೂರಲು ಗೌಡರೇ ಕಾರಣ: ಸಿದ್ದು