ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಜನಪರ ಕಾರ್ಯಗಳೆ ಬಿಜೆಪಿಗೆ ಶ್ರೀರಕ್ಷೆ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನಪರ ಕಾರ್ಯಗಳೆ ಬಿಜೆಪಿಗೆ ಶ್ರೀರಕ್ಷೆ: ಸಿಎಂ
ಕಳೆದ 10 ತಿಂಗಳು ನಾವು ಸಾಧಿಸಿರುವ ಅಭೂತ ಪೂರ್ವ ಜನಪರ ಕಾರ್ಯಗಳೇ ಲೋಕಸಭಾ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದ್ದು, ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಶಾಲಿಯಾಗುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರದಲ್ಲಿ ಯುಪಿಎ ಸರ್ಕಾರದ ವೈಫಲ್ಯದ ಪರಿಣಾಮ, ಭಯೋತ್ಪಾದನೆ ತಡೆಯುವಲ್ಲಿ ವಿಫಲವಾಗಿದೆ. ಅದರೊಂದಿಗೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ ಎಂದರು.

ರಾಜ್ಯದಲ್ಲಿ ತಮ್ಮ ಆಡಳಿತಾವಧಿಯಲ್ಲಿ 18 ಲಕ್ಷ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್, ಅರ್ಹ ಬಡಜನತೆಗಾಗಿ 20 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು 19 ರೂ. ನಂತೆ ಖರೀದಿ ಮಾಡಿ 3 ರೂ.ಗಳಂತೆ ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುತ್ತಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುವ ದೃಷ್ಟಿಯಿಂದ 1 ಲೀಟರ್ ಹಾಲಿಗೆ 2 ರೂ. ಪ್ರೋತ್ಸಾಹ ಧನ ನೀಡುವುದಾಗಿಯೂ, ರೈತರಿಗೆ ಶೇ. 3 ರೂ.ನಂತೆ ಸಾಲ ನೀಡುತ್ತಿರುಗವುದಾಗಿ ತಿಳಿಸಿದ ಅವರು, ಬಡ ಕುಟುಂಬದಲ್ಲಿ ಜನಿಸಿದ ಹೆಣ್ಣುಮಕ್ಕಳಿಗೆ ಸಾವಿರ ರೂ.ಗಳ ಠೇವಣಿಯ ಬಾಂಡ್ ನೀಡಿ 18 ವರ್ಷ ವಯಸ್ಸಿಗೆ ಬರುವಂತೆ ಭಾಗ್ಯಲಕ್ಷ್ಮಿ ಯೋಜನೆ ಪ್ರಾರಂಭಿಸಿರುವುದಾಗಿ ತಿಳಿಸಿದರು. ಈ ಎಲ್ಲ ಸಾಧನೆಯಿಂದಾಗಿ ರಾಜ್ಯದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸಲಿದೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೃತೀಯ ರಂಗಕ್ಕೆ ಅಧಿಕಾರ ನಿಶ್ಚಿತ: ದೇವೇಗೌಡ
ಆಡ್ವಾಣಿ ಪ್ರಧಾನಿಯಾದ್ರೆ ಚರ್ಚ್,ಮಸೀದಿ ಉಳಿಯಲ್ಲ: ಬಂಗಾರಪ್ಪ
ಅಧಿಕಾರಕ್ಕೆ ಬಂದ್ರೆ ಬಜರಂಗದಳ ನಿಷೇಧ: ದೇವೇಗೌಡ
ಜೆಡಿಎಸ್‌ನ ಡಿ.ಟಿ.ಜಯಕುಮಾರ್ ಬಿಜೆಪಿ ತೆಕ್ಕೆಗೆ
ನೌಶಾದ್ ಹತ್ಯೆಯ ಹಿಂದೆ ದಾವೂದ್ ಕೈವಾಡ: ಆಚಾರ್ಯ
ಪ್ರಧಾನಿ ಸಿಂಗ್ ಸೋನಿಯಾ ಗುಲಾಮ: ಬಿಜೆಪಿ