ಕಾವೇರಿ ವಿವಾದದ ರಾಜೀನಾಮೆ ವಿಚಾರದಲ್ಲಿ ಸಂಸದ ಅಂಬರೀಷ್ ಅವರು ಜಿಲ್ಲೆಯ ಜನತೆಗೆ ದ್ರೋಹ ಎಸಗಿರುವುದಾಗಿ ಆರೋಪಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚಲುವರಾಯಸ್ವಾಮಿ, ಮಾದೇಗೌಡರಂತೆ ಅಂಬಿ ತ್ಯಾಗ ಮಾಡಿಲ್ಲ, ಅವರಂತೆ ತ್ಯಾಗ ಮಾಡಿದ್ರೆ ಅಂಬರೀಷ್ ಕಾಲಿಗೆ ಬೀಳುತ್ತಿದ್ದೆ ಎಂದು ತಿಳಿಸಿದ್ದಾರೆ.
ತಾನು ಕಾವೇರಿ ವಿವಾದದಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ತ್ಯಾಗ ಮಾಡಿದ್ದೆ, ಬೇರೆ ಯಾರೇ ಆಗಿದ್ದರೂ ಆ ರೀತಿ ತ್ಯಾಗ ಮಾಡುತ್ತಿದ್ದರೆ ಎಂದು ಅಂಬರೀಷ್ ಇತ್ತೀಚೆಗಷ್ಟೇ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದೇ ದೊಡ್ಡ ತ್ಯಾಗ ಎಂದು ಹೇಳುತ್ತಿರುವ ಅಂಬಿ ಹೇಳಿಕೆ ಜನರನ್ನು ಮೋಸಗೊಳಿಸುಂತಹದ್ದು ಎಂದು ಟೀಕಿಸಿದರು.
ಸಂಸದ ಸ್ಥಾನಕ್ಕೆ ರಾಜೀನಾಮೆಯ ನಂತರವೂ ಅಂಬರೀಷ್ ಸಂಸದರನ್ನು ನಿಧಿಯನ್ನು ಬಳಸಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಅಂಬಿ ತ್ಯಾಗ ಮಹತ್ತರವಾದದ್ದೇನೂ ಅಲ್ಲ ಎಂದು ಚಲುವರಾಯಸ್ವಾಮಿ ಹರಿಹಾಯ್ದಿದ್ದಾರೆ. |