ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಹುಲ್ ಮನಬಂದಂತೆ ಮಾತನಾಡಬಾರದು: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಹುಲ್ ಮನಬಂದಂತೆ ಮಾತನಾಡಬಾರದು: ಸಿಎಂ
ರಾಜ್ಯದ ಅಭಿವೃದ್ದಿ ಕಾರ್ಯಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮನಬಂದಂತೆ ಮಾತನಾಡಿರುವುದಕ್ಕೆ ಈ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಒಂದು ಸಾವಿರ ಕೋಟಿ ರೂಪಾಯಿ ನೀಡಿದ್ದರು ಕೂಡ ಅದನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸಿಲ್ಲ ಎಂಬ ರಾಹುಲ್ ಗಾಂಧಿ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಯಾರೋ ಬರೆದುಕೊಟ್ಟ ವಿಚಾರಗಳನ್ನು ಇಟ್ಟುಕೊಂಡು, ನಿಖರವಾದ ಅಂಕಿ-ಅಂಶಗಳಿಲ್ಲದೆ ಮಾತನಾಡುವುದು ಸರಿಯಲ್ಲ. ನಮ್ಮನ್ನು ಕೇಳಿದ್ದರೆ ನಾವೇ ಸರಿಯಾದ ಅಂಕಿ-ಅಂಶ ನೀಡುತ್ತಿದ್ದೇವೆ, ಆ ನಿಟ್ಟಿನಲ್ಲಿ ರಾಹುಲ್ ಮನಬಂದಂತೆ ಮಾತನಾಡುವುದು ಒಳ್ಳೆ ಬೆಳವಣಿಗೆ ಅಲ್ಲ ಎಂದರು.

ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಅವರ ಸ್ವಂತ ನಿವಾಸದಲ್ಲಿ ಮಾಜಿ ಸಚಿವ ಡಿ.ಟಿ.ಜಯಕುಮಾರ್, ಚಿತ್ರನಟಿ ವನಿತಾವಾಸು ಸೇರಿದಂತೆ ಹಲವು ಮುಖಂಡರ ಬಿಜೆಪಿ ಸೇರ್ಪಡೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ತಾರತಮ್ಯಗಳ ಬಗ್ಗೆ ಬಿಜೆಪಿ ಈಗಾಗಲೇ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಕೇಂದ್ರದಿಂದ ಆಗಿರುವ ಅನ್ಯಾಯಗಳಿಗೆ ರಾಜ್ಯದ ಜನತೆ ಈ ಚುನಾವಣೆಯಲ್ಲಿ ಬಿಜೆಪಿ ಪರವಾದ ಫಲಿತಾಂಶ ನೀಡುವ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಧರಂಸಿಂಗ್‌ಗೆ ಸೇರಿದ ಹತ್ತು ಲಕ್ಷ ನಗದು ವಶ
ಅಂಬಿ ತ್ಯಾಗ ಮಾಡಿದ್ರೆ ಅವರ ಕಾಲಿಗೆ ಬೀಳ್ತಿದ್ದೆ: ಚಲುವರಾಯಸ್ವಾಮಿ
ಜನಪರ ಕಾರ್ಯಗಳೆ ಬಿಜೆಪಿಗೆ ಶ್ರೀರಕ್ಷೆ: ಸಿಎಂ
ತೃತೀಯ ರಂಗಕ್ಕೆ ಅಧಿಕಾರ ನಿಶ್ಚಿತ: ದೇವೇಗೌಡ
ಆಡ್ವಾಣಿ ಪ್ರಧಾನಿಯಾದ್ರೆ ಚರ್ಚ್,ಮಸೀದಿ ಉಳಿಯಲ್ಲ: ಬಂಗಾರಪ್ಪ
ಅಧಿಕಾರಕ್ಕೆ ಬಂದ್ರೆ ಬಜರಂಗದಳ ನಿಷೇಧ: ದೇವೇಗೌಡ