ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಇನ್ನಾವ ದೇಶದ ನಿರ್ಮಾಣ ಮಾಡಿದ್ದೀರಿ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನಾವ ದೇಶದ ನಿರ್ಮಾಣ ಮಾಡಿದ್ದೀರಿ?
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಂದ ರಾಜ್ಯ ಪಾಠ ಕಲಿಯಬೇಕಿಲ್ಲ. ಮೊದಲು ರಾಹುಲ್ ಗಾಂಧಿ ರಾಜ್ಯದ ಜನತೆಯ ಜನತೆಯ ಕ್ಷಮೆ ಕೇಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಯೋತ್ಪಾದನೆಯ ಚಟುವಟಿಕೆಯ ಬಗ್ಗೆ ರಾಹುಲ್ ಗಾಂಧಿಗೆ ತಿಳಿದಿಲ್ಲ. ಇದರಿಂದ ಒಂದು ಲಕ್ಷಕ್ಕೂ ಅಧಿಕ ಮುಗ್ಧರು ಈ ದೇಶದಲ್ಲಿ ಪ್ರಾಣ ತೆತ್ತಿದ್ದಾರೆ. ಹತ್ತು ಸಾವಿರಕ್ಕೂ ಅಧಿಕ ಯೋಧರು ಮಡದಿದ್ದಾರೆ. ಇವೆಲ್ಲ ವಿಷಯಗಳ ಬಗ್ಗೆ ರಾಹುಲ್‌ಗೆ ತಿಳಿವಳಿಕೆ ಇಲ್ಲ. ದೇಶದ ಒಳಗಡೆ ನುಸುಳುವ ದೇಶ ದ್ರೋಹಿ ಉಗ್ರರ ಜೊತೆಗೆ ಬಡದಾಡಿ ಪ್ರಾಣ ತೆತ್ತಿದ್ದು ಪ್ರಮುಖ ಸಂಗತಿ ಆಗುವುದಿಲ್ಲ ಎಂದು ಯಡಿಯೂರಪ್ಪ ಖೇದ ವ್ಯಕ್ತಪಡಿಸಿದ್ದಾರೆ.

ಈಗ ಕಾಂಗ್ರೆಸ್ ಬಡತನದ ಬಗ್ಗೆ, ಭಾರತ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾದರೆ ಕಳೆದ 62 ವರ್ಷಗಳಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಆಳ್ವಿಕೆಯಲ್ಲಿ ಇದ್ದಾಗ ಭಾರತ ನಿರ್ಮಾಣ ಕಾರ್ಯ ಆಗಿಲ್ಲವೇನು? ಇನ್ನಾವ ದೇಶದ ನಿರ್ಮಾಣ ಮಾಡಿದ್ದೀರಿ? ಚುನಾವಣೆ ಬಂದಾಗ ಭಾರತದ ನೆನಪಾಗುತ್ತದಾ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಅನುದಾನದ ಬಗ್ಗೆ ತಪ್ಪು ಮಾಹಿತಿ ನೀಡಿ ಮತದಾರರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಹುಲ್ ಮನಬಂದಂತೆ ಮಾತನಾಡಬಾರದು: ಸಿಎಂ
ಧರಂಸಿಂಗ್‌ಗೆ ಸೇರಿದ ಹತ್ತು ಲಕ್ಷ ನಗದು ವಶ
ಅಂಬಿ ತ್ಯಾಗ ಮಾಡಿದ್ರೆ ಅವರ ಕಾಲಿಗೆ ಬೀಳ್ತಿದ್ದೆ: ಚಲುವರಾಯಸ್ವಾಮಿ
ಜನಪರ ಕಾರ್ಯಗಳೆ ಬಿಜೆಪಿಗೆ ಶ್ರೀರಕ್ಷೆ: ಸಿಎಂ
ತೃತೀಯ ರಂಗಕ್ಕೆ ಅಧಿಕಾರ ನಿಶ್ಚಿತ: ದೇವೇಗೌಡ
ಆಡ್ವಾಣಿ ಪ್ರಧಾನಿಯಾದ್ರೆ ಚರ್ಚ್,ಮಸೀದಿ ಉಳಿಯಲ್ಲ: ಬಂಗಾರಪ್ಪ