ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಕ್ಷಾಂತರ ಸರಿಯಾದ್ರೆ,ಮತಾಂತರವಾದ್ರೆ ತಪ್ಪಾ?: ಬರಗೂರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಕ್ಷಾಂತರ ಸರಿಯಾದ್ರೆ,ಮತಾಂತರವಾದ್ರೆ ತಪ್ಪಾ?: ಬರಗೂರು
NRB
ಮತಾಂತರ ಎಂಬುದು ಖಂಡಿತವಾಗಿಯೂ ದೇಶದ ಸಮಸ್ಯೆಯಲ್ಲ. ಅದು ಹಿಂದುತ್ವದ ಒಳಗಿನ ಸಮಸ್ಯೆ. ರಾಜಕಾರಣಿಗಳು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ(ಮತಾಂತರ) ಮಾಡಬಹುದಾದರೆ, ಒಬ್ಬ ವ್ಯಕ್ತಿ ತಾನು ಇಷ್ಟಪಟ್ಟ ಧರ್ಮಕ್ಕೆ ಯಾಕೆ ಮತಾಂತರ ಆಗಬಾರದು ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದ್ದಾರೆ.

ಕೋಮುವಾದಿಗಳು ಮತಾಂತರ ಸಮಸ್ಯೆಯನ್ನು ಸಂಸ್ಕೃತಿಯ ಮತ್ತು ಧಾರ್ಮಿಕ ಸ್ವಾಭಿಮಾನದ ಸಮಸ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.

1992 ರಲ್ಲಿ ಮಂದಿರ-ಮಸೀದಿ ವಿವಾದದ ಸಂದರ್ಭದಲ್ಲಿಯೂ ಇದೇ ರೀತಿಯ ವಾತಾವರಣ ಸೃಷ್ಟಿಯಾಗಿತ್ತು. ಅಂದು ದೇಶವನ್ನು ಕಿತ್ತು ತಿನ್ನುವ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದರೂ ಮಂದಿರ ನಿರ್ಮಾಣವೇ ದೊಡ್ಡದು ಎಂಬಂತೆ ಬಿಂಬಿಸಲಾಗಿತ್ತು. ಅದರಿಂದ ಸಾಕಷ್ಟು ಜನ ತೊಂದರೆ ಅನುಭವಿಸಿದ್ದರು. ಇದೀಗ ಮತಾಂತರ ಅಂತಹ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಹೇಳಿದರು.

ಮತಾಂತರದಿಂದ ಸಮಾನತೆಯ ಹೋರಾಟ ಶಕ್ತಿ ಕ್ಷೀಣಿಸುತ್ತಿದೆ. ಸಮಾನತೆಯ ಹೋರಾಟ ಅಂದರೆ ಅದು ಸಮಾಜದ ಹೋರಾಟ. ಆದರೆ, ಮತಾಂತರ ಎಂಬ ಅನಗತ್ಯ ವಿವಾದದಿಂದ ಅದು ಗೌಣವಾಗುತ್ತಿದೆ ಎಂದು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸದಾನಂದ ಗೌಡರಲ್ಲಿ ಕ್ಷಮೆ ಕೋರಿದ ಎಸ್‌.ಎಂ.ಕೃಷ್ಣ!
ಲೋಕಸಭೆ ಪ್ರಥಮ ಹಂತ: ನಾಳೆ ಪ್ರಚಾರ ಕಾರ್ಯಕ್ಕೆ ತೆರೆ
ರಾಜ್ಯಾದ್ಯಂತ ವರುಣನ ಆರ್ಭಟಕ್ಕೆ 7 ಬಲಿ
ಮದ್ಯದಂಗಡಿಗಳಿಂದ ಬಿಜೆಪಿ ಹಫ್ತಾ ವಸೂಲಿ: ಕುಮಾರಸ್ವಾಮಿ
ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ: ಶೋಭಾ ಕರಂದ್ಲಾಜೆ
ಇನ್ನಾವ ದೇಶದ ನಿರ್ಮಾಣ ಮಾಡಿದ್ದೀರಿ?