ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಂಬೇಡ್ಕರ್‌ಗೆ ಅವಹೇಳನ: ಶಾಸಕ ಮಸ್ಕಿ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂಬೇಡ್ಕರ್‌ಗೆ ಅವಹೇಳನ: ಶಾಸಕ ಮಸ್ಕಿ ಬಂಧನ
ಭಾರತ ರತ್ನ, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬರೆದಿಲ್ಲ ಎಂಬ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ವಿಧಾನಪರಿಷತ್ ಸದಸ್ಯ ಮನೋಹರ ಮಸ್ಕಿ ಅವರನ್ನು ಸುರಪುರ ಪೊಲೀಸರು ಸೋಮವಾರ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಯಾದಗಿರಿ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 118ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಂದರ್ಭದಲ್ಲಿ ಮಸ್ಕಿ, ಅಂಬೇಡ್ಕರ್ ಅವರು ಸಂವಿಧಾನ ಬರೆದಿಲ್ಲ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಸ್ಕಿ ಅವರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮನಯನ್ ಅವರು ತಿಳಿಸಿದ್ದಾರೆ.

ಮಸ್ಕಿ ಅವರು ವಿವಾದಿತ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಿವಿಧ ದಲಿತಪರ ಸಂಘಟನೆಗಳು ಕಲ್ಬುರ್ಗಿ, ಜೇವರ್ಗಿ, ಶಹಾಪೂರ, ಸುರಪುರ, ಯಾದಗಿರಿ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಿ ಮಸ್ಕಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿದ್ದು, ಹಲವೆಡೆ ಹಿಂಸಾಚಾರ ಸಂಭವಿಸಿದೆ.

ದಿನ್ನಿಯಿಂದ ರಾಯಚೂರಿಗೆ ಬರುತ್ತಿರುವ ಬಸ್ ಅನ್ನು ರಾಂಪುರ ಗ್ರಾಮದ ಹತ್ತಿರ ತಡೆದು ಮೂವರು ಕಿಡಿಗೇಡಿಗಳು ಬಸ್‌ಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣ ದುರ್ಬಳಕೆ-ಸಿಬಿಐ ತನಿಖೆಗೆ ಕಾಂಗ್ರೆಸ್ ಒತ್ತಾಯ
ಶ್ರೀರಾಮಸೇನೆ-ಆಡ್ವಾಣಿ ಭಾಷಣದ ಸ್ಥಳ ಗೋಮೂತ್ರದಿಂದ ಶುದ್ಧಿ!
ಪಕ್ಷಾಂತರ ಸರಿಯಾದ್ರೆ,ಮತಾಂತರವಾದ್ರೆ ತಪ್ಪಾ?: ಬರಗೂರು
ಸದಾನಂದ ಗೌಡರಲ್ಲಿ ಕ್ಷಮೆ ಕೋರಿದ ಎಸ್‌.ಎಂ.ಕೃಷ್ಣ!
ಲೋಕಸಭೆ ಪ್ರಥಮ ಹಂತ: ನಾಳೆ ಪ್ರಚಾರ ಕಾರ್ಯಕ್ಕೆ ತೆರೆ
ರಾಜ್ಯಾದ್ಯಂತ ವರುಣನ ಆರ್ಭಟಕ್ಕೆ 7 ಬಲಿ