ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಎನ್.ಸಂಪಂಗಿ ವಿರುದ್ಧ ಚುನಾವಣಾ ಆಯೋಗ ಕ್ರಿಮಿನಲ್ ದೂರು ದಾಖಲಿಸಿದೆ.
ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ವಾಹನ ಜಪ್ತಿಗೆ ಮುಂದಾದ ಸಂದರ್ಭದಲ್ಲಿ ಶಾಸಕ ಎನ್.ಸಂಪಂಗಿ ಅವರು ಅಡ್ಡಿಪಡಿಸಿದ ಪರಿಣಾಮ ಕ್ರಿಮಿನಲ್ ದೂರು ನೀಡಿರುವುದಾಗಿ ಸಹಾಯಕ ಚುನಾವಣಾಧಿಕಾರಿ ರಂಗಪ್ಪ ತಿಳಿಸಿದ್ದಾರೆ.
ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕರಾಗಿರುವ ಎನ್.ಸಂಪಂಗಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ಪ್ರಚಾರ ಕಾರ್ಯಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ವಾಹನ ಬಳಸಿದ್ದರಿಂದ ವಾಹನ ಜಪ್ತಿಗೆ ಚುನಾವಣಾಧಿಕಾರಿಗಳು ಮುಂದಾದಾಗ ಅಡ್ಡಿ ಪಡಿಸಿದ್ದರು. |