ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ತೃತೀಯ ರಂಗಕ್ಕೆ ಜನರ ಬೆಂಬಲವಿದೆ: ದೇವೇಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೃತೀಯ ರಂಗಕ್ಕೆ ಜನರ ಬೆಂಬಲವಿದೆ: ದೇವೇಗೌಡ
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮಂಜಿನಂತೆ ಕರಗುತ್ತಿದ್ದು, ಅವರ ಜನದ್ರೋಹಿ ಆಡಳಿತದಿಂದ ಬೇಸತ್ತಿರುವ ಜನತೆ ತೃತೀಯ ರಂಗಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭವಿಷ್ಯ ನುಡಿದಿದ್ದಾರೆ.

ಚುನಾವಣೆ ಬಳಿಕ ತೃತೀಯ ರಂಗದ ನಾಯಕತ್ವದಲ್ಲಿ ಜಾತ್ಯತೀತ ನಿಲುವಿನ ಹೊಸ ರಾಜಕೀಯ ವ್ಯವಸ್ಥೆ ರೂಪಗೊಳ್ಳಲಿದ್ದು, ಸರ್ಕಾರ ರಚನೆಯಲ್ಲಿ ತೃತೀಯ ರಂಗ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ತಿಳಿಸಿದರು.

ತೃತೀಯ ರಂಗಕ್ಕೆ ದೇಶದೆಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದೆಲ್ಲೆಡೆ ಜೆಡಿಎಸ್ ಪಕ್ಷಕ್ಕೆ ಜನತೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಮತ್ತು ಬಿಜೆಪಿಗೆ ಅಧಿಕಾರ ತಪ್ಪುವ ಭೀತಿ ಎದುರಾಗಿದ್ದು, ಇದರಿಂದಾಗಿಯೇ ಪಕ್ಷಗಳ ನಾಯಕರು ಬೀದಿ ಜಗಳಕ್ಕೆ ನಿಂತಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿ ವಿಷಯ ಚರ್ಚೆಯಾಗುತ್ತಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಕೆಳಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭೀಕರ ಅಪಘಾತ: ಸುರತ್ಕಲ್‌‌ನ 6ಮಂದಿ ದಾರುಣ ಸಾವು
'ಚೌಧರಿ' ವಿರುದ್ಧ ಚಾರ್ಜ್‌‌ಶೀಟ್‌ಗೆ 1 ತಿಂಗಳ ಕಾಲಾವಕಾಶ
ಯಡಿಯೂರಪ್ಪ ರೈತರನ್ನು ಕೊಂದ ಪಾಪಿ: ಸಿದ್ದರಾಮಯ್ಯ
ಸಮಸ್ಯೆ ಪರಿಹರಿಸದಿದ್ರೆ ರಾಜಕೀಯದಿಂದ ನಿರ್ಗಮನ: ಸಿಎಂ
ಅಧಿಕಾರ ನೀಡಿ: ಸಂವಿಧಾನ ತಿದ್ದುಪಡಿ-ಆಡ್ವಾಣಿ ಭರವಸೆ
ನಕ್ಸಲ್ ಪೀಡಿತ ಪ್ರದೇಶಗಳಿಗೆ ವಿಶೇಷ ಭದ್ರತೆ:ಅಜಯ್ ಕುಮಾರ್