ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಗಳೂರು: ಮತದಾನ ಬಹಿಷ್ಕರಿಸಲು ನಕ್ಸಲ್ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರು: ಮತದಾನ ಬಹಿಷ್ಕರಿಸಲು ನಕ್ಸಲ್ ಕರೆ
ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಮತದಾರರಿಗೆ ನಕ್ಸಲೀಯರು ಕರೆ ನೀಡಿದ್ದಾರೆ.

ಮತದಾರರು ಚುನಾವಣೆಯಲ್ಲಿ ಪಾಲ್ಗೊಳ್ಳಬಾರದೆಂಬ ಹಲವು ಕರಪತ್ರಗಳನ್ನು ಬೆಳ್ತಂಗಡಿ ತಾಲೂಕಿನ ಹಳ್ಳಿಗಳ ಮನೆಗಳು ಮತ್ತು ಅಂಗಡಿಗಳ ಮುಂದೆ ರಾತ್ರಿ ಎಸೆದು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಹೆಸರಿನಲ್ಲಿ ಮುದ್ರಿತವಾಗಿರುವ ಈ ಕರಪತ್ರದಲ್ಲಿ ಮತದಾರರು ಮತಗಟ್ಟೆಗಳಿಂದ ದೂರ ಇರುವಂತೆ ಕೋರಲಾಗಿದೆ ಎನ್ನಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಎಲ್ಲ ಕಡೆಗಳಲ್ಲಿಯೂ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ನಕ್ಸಲರ ಬಗ್ಗೆ ತೀವ್ರ ನಿಗಾ ವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಥಮ ಹಂತ: 17 ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ರೆಡ್ಡಿ ಬಳಿ ಅಪಾರ ಕಪ್ಪು ಹಣವಿದೆ: ಕುಮಾರಸ್ವಾಮಿ
ತೃತೀಯ ರಂಗಕ್ಕೆ ಜನರ ಬೆಂಬಲವಿದೆ: ದೇವೇಗೌಡ
ಭೀಕರ ಅಪಘಾತ: ಸುರತ್ಕಲ್‌‌ನ 6ಮಂದಿ ದಾರುಣ ಸಾವು
'ಚೌಧರಿ' ವಿರುದ್ಧ ಚಾರ್ಜ್‌‌ಶೀಟ್‌ಗೆ 1 ತಿಂಗಳ ಕಾಲಾವಕಾಶ
ಯಡಿಯೂರಪ್ಪ ರೈತರನ್ನು ಕೊಂದ ಪಾಪಿ: ಸಿದ್ದರಾಮಯ್ಯ