ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೈಂದೂರು: ಸಹಕಾರಿ ಬ್ಯಾಂಕ್ ದರೋಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೈಂದೂರು: ಸಹಕಾರಿ ಬ್ಯಾಂಕ್ ದರೋಡೆ
ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಕಂಬದಕೋಣೆ ರೈತರ ಸೇವಾ ಸಹಕಾರಿ ಬ್ಯಾಂಕ್‌ನಿಂದ 14ಕೆ.ಜಿ ಚಿನ್ನ ಹಾಗೂ 1.86ಲಕ್ಷ ರೂ.ನಗದನ್ನು ದರೋಡೆಕೋರರ ತಂಡವೊಂದು ಲಾಕರ್ ಸಹಿತ ತೆಗೆದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ಕಂಬದಕೋಣೆ ರೈತ ಸೇವಾ ಸಹಕಾರಿ ಬ್ಯಾಂಕಿಗೆ ಇಂದು ಮುಂಜಾನೆ ಕಾರಿನಲ್ಲಿ ಆಗಮಿಸಿದ್ದ ದರೋಡೆಕೋರರು ತಂಡವೊಂದು 14ಕೆ.ಜಿ ಚಿನ್ನ ಹಾಗೂ 1.86ಲಕ್ಷ ರೂ.ನಗದು ಹೊಂದಿದ್ದ ಸುಮಾರು 800ಕೆ.ಜಿ.ಭಾರದ ಲಾಕರ್ ಅನ್ನು ಹೊತ್ತೊಯ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಬೆರಳಚ್ಚು ತಜ್ಞರು, ಬೈಂದೂರು ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದರೋಡೆಕೋರರ ಬಂಧನಕ್ಕೆ ಜಾಲ ಬೀಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ದರೋಡೆ ಕುರಿತು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿರುವ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಹೇಳಿದ್ದು, ಚಿನ್ನ ಹಾಗೂ ನಗದಿಗೆ ವಿಮೆ ಮಾಡಿಸಿರುವುದಾಗಿ ವಿವರಿಸಿದರು,
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮನೆ ಬಾಗಿಲು ಕಾಯುವ ಪರಿಸ್ಥಿತಿ ಬರುತ್ತೆ: ದೇವೇಗೌಡ
ಕಾರವಾರ: ಆಳ್ವ ಪರ ಸಲ್ಮಾನ್ ಖಾನ್ ಪ್ರಚಾರ
ಗಡಿ ಒತ್ತುವರಿ-ಜಂಟಿ ಸಮೀಕ್ಷೆಗೆ ಹೈಕೋರ್ಟ್ ಆದೇಶ
ಯಡಿಯೂರಪ್ಪ ಅತ್ಯಂತ ದುರ್ಬಲ ಸಿಎಂ: ವೀರಪ್ಪ ಮೊಯ್ಲಿ
ಮಂಗಳೂರು: ಮತದಾನ ಬಹಿಷ್ಕರಿಸಲು ನಕ್ಸಲ್ ಕರೆ
ಪ್ರಥಮ ಹಂತ: 17 ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್