ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮೊಯ್ಲಿ, ಎಚ್‌ಡಿಕೆ ಸೇರಿ 273 ಅಭ್ಯರ್ಥಿಗಳ 'ಹಣೆಬರಹ' ನಿರ್ಧಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊಯ್ಲಿ, ಎಚ್‌ಡಿಕೆ ಸೇರಿ 273 ಅಭ್ಯರ್ಥಿಗಳ 'ಹಣೆಬರಹ' ನಿರ್ಧಾರ
NRB
ರಾಜ್ಯದ ಪ್ರಥಮ ಹಂತದ ಲೋಕಸಭಾ ಚುನಾವಣೆಗೆ ಗುರುವಾರ ನಡೆಯುವ ಮತದಾನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಂ.ವೀರಪ್ಪ ಮೊಯ್ಲಿ, ಧರಂಸಿಂಗ್, ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವರಾದ ಅನಂತ್ ಕುಮಾರ್, ಜಾಫರ್ ಷರೀಫ್, ಮಾರ್ಗರೇಟ್ ಆಳ್ವ, ಸಚಿವ ರೇವೂನಾಯಕ ಬೆಳಮಗಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 17ಕ್ಷೇತ್ರಗಳಲ್ಲಿ 273ಮಂದಿ ಅಭ್ಯರ್ಥಿಗಳ ರಾಜಕೀಯ ಹಣೆಬರಹ ನಿರ್ಧರಿಸಲಿದ್ದಾರೆ.

ರಾಜ್ಯದ ಚಿಕ್ಕೋಡಿ, ಬೆಳಗಾವಿ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಉತ್ತರ ಕನ್ನಡ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುಕ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

NRB
ಗುರುವಾರ ಬೆಳಿಗ್ಗೆ 7ರಿಂದ ಸಂಜೆ ಐದರವರೆಗೆ ಮತದಾನ ನಡೆಯಲಿದ್ದು, ಎಲ್ಲೆಡೆ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. 17ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 37ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರೆ, ಚಿಕ್ಕೋಡಿ ಹಾಗೂ ಬಳ್ಳಾರಿಯಲ್ಲಿ ಏಳು ಮಂದಿ ಅಖಾಡದಲ್ಲಿದ್ದಾರೆ.

ಮೊದಲ ಹಂತದಲ್ಲಿ 2,57,85,835 ಮಂದಿ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. 1.62ಲಕ್ಷ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರಥಮ ಹಂತದಲ್ಲಿ 29,126ಮತಗಟ್ಟೆಗಳಿದ್ದು, 6557 ಸೂಕ್ಷ್ಮ ಹಾಗೂ 3,522 ಅತಿಸೂಕ್ಷ್ಮ ಮತಗಟ್ಟೆಗಳಿವೆ. ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ. 45ಸಾವಿರ ವಿದ್ಯುನ್ಮಾನ ಮತಯಂತ್ರ ಬಳಸಲಾಗುತ್ತಿದೆ.

17ಲೋಕಸಭಾ ಕ್ಷೇತ್ರಗಳ ಜೊತೆ ಬೀದರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಹ ಮತದಾನ ನಡೆಯಲಿದ್ದು, ಇಲ್ಲಿ ಮಾಜಿ ಸಚಿವ ಗುರುಪಾದಪ್ಪ ಅವರ ಪುತ್ರ ಸೂರ್ಯಕಾಂತ, ಜೆಡಿಎಸ್‌ನಿಂದ ಮಾರುತಿ ಕಾಶೆಂಪೂರ್ ಸೇರಿದಂತೆ 18ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಕ್ಷೇತ್ರವಾರು ಒಟ್ಟು ಮತಗಟ್ಟೆಗಳ ಸಂಖ್ಯೆಗಳ ವಿವರ: ಚಿಕ್ಕೋಡಿ - 1408, ಬೆಳಗಾವಿ - 1470 , ಬಿಜಾಪುರ - 1466, ಗುಲ್ಬರ್ಗ - 1663, ರಾಯಚೂರು - 1630 , ಬೀದರ್ - 1571, ಕೊಪ್ಪಳ - 1589, ಬಳ್ಳಾರಿ - 1589, ಉತ್ತರಕನ್ನಡ - 1639, ಚಿತ್ರದುರ್ಗ - 1892, ತುಮಕೂರು - 1711, ಬೆಂಗಳೂರು ಗ್ರಾಮಾಂತರ - 2201, ಬೆಂಗಳೂರು ಕೇಂದ್ರ - 1780, ಬೆಂಗಳೂರು ದಕ್ಷಿಣ - 1765, ಬೆಂಗಳೂರು ಉತ್ತರ - 1966, ಚಿಕ್ಕಬಳ್ಳಾಪುರ - 1520 ,ಕೋಲಾರ - 1912

ನೀತಿ ಸಂಹಿತೆ ಉಲ್ಲಂಘನೆ ಬಿಜೆಪಿ ಮುಂದು: ಪ್ರಥಮ ಹಂತದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಒಟ್ಟು 406ದೂರುಗಳು ದಾಖಲಾಗಿರುವುದಾಗಿ ರಾಜ್ಯ ಚುನಾವಣಾ ಆಯುಕ್ತ ಎಂ.ಎನ್.ವಿದ್ಯಾಶಂಕರ್ ತಿಳಿಸಿದ್ದು, ಇದರಲ್ಲಿ 125ದೂರುಗಳು ಬಿಜೆಪಿ ವಿರುದ್ಧ ದಾಖಲಾಗುವ ಮೂಲಕ ಪ್ರಥಮ ಸ್ಥಾನದಲ್ಲಿದೆ ಎಂದರು. ಕಾಂಗ್ರೆಸ್ ವಿರುದ್ಧ 103 ಹಾಗೂ ಜೆಡಿಎಸ್ ವಿರುದ್ಧ 60 ದೂರು, ಇನ್ನುಳಿದಂತೆ ಬಿಎಸ್ಪಿ, ಸಿಪಿಐ(ಎಂ), ಸಿಪಿಐ ಹಾಗೂ ಪಕ್ಷೇತರರ ವಿರುದ್ಧ ದೂರು ದಾಖಲಾಗಿದೆ. ಒಟ್ಟು 226.5ಮಿಲಿಯನ್ ಹಣವನ್ನು ವಶಪಡಿಸಿಕೊಂಡಿದೆ. ಅದರಲ್ಲಿ ಗಣಿಧಣಿಗಳ ಬೀಡಾದ ಬಳ್ಳಾರಿ ಲೋಕಸಭಾ ಕ್ಷೇತ್ರವೊಂದರಲ್ಲಿಯೇ 156.6ಮಿಲಿಯನ್ ಹಣ ವಶಪಡಿಸಿಕೊಂಡಿದೆ. ಎರಡನೇ ಹಂತದ ಮತದಾನ ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ 16.6ಮಿಲಿಯನ್ ಹಣ ವಶಪಡಿಸಿಕೊಂಡಿರುವುದಾಗಿ ಆಯೋಗ ತಿಳಿಸಿದೆ.

ಎರಡನೇ ಹಂತ: 140 ಲೋಕಸಭೆ ಕ್ಷೇತ್ರಗಳಲ್ಲಿ ಮತದಾ

15 ನೇ ಲೋಕಸಭೆ ಚುನಾವಣೆಯ ಎರಡನೇ ಹಂತದ ಚುನಾವಣೆಗಳ ಮತದಾನ ಗುರುವಾರ ಒಟ್ಟು 140 ಕ್ಷೇತ್ರಗಳಲ್ಲಿ ನಡೆಯಲಿದೆ. ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಗೋವಾ, ಅಸ್ಸಾಂ, ಜಾರ್ಖಂಡ್, ಮಧ್ಯಪ್ರದೇಶ, ಮಣಿಪುರ, ಮಹಾರಾಷ್ಟ್ರ, ಓರಿಸ್ಸಾ, ಪಶ್ಚಿಮ ಬಂಗಾಲ,ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಮತದಾನ ನಡೆಯಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು: ಬಿಜೆಪಿಗೆ ಮತ ಹಾಕದಂತೆ ಫತ್ವಾ!
ಬೈಂದೂರು: ಸಹಕಾರಿ ಬ್ಯಾಂಕ್ ದರೋಡೆ
ಮನೆ ಬಾಗಿಲು ಕಾಯುವ ಪರಿಸ್ಥಿತಿ ಬರುತ್ತೆ: ದೇವೇಗೌಡ
ಕಾರವಾರ: ಆಳ್ವ ಪರ ಸಲ್ಮಾನ್ ಖಾನ್ ಪ್ರಚಾರ
ಗಡಿ ಒತ್ತುವರಿ-ಜಂಟಿ ಸಮೀಕ್ಷೆಗೆ ಹೈಕೋರ್ಟ್ ಆದೇಶ
ಯಡಿಯೂರಪ್ಪ ಅತ್ಯಂತ ದುರ್ಬಲ ಸಿಎಂ: ವೀರಪ್ಪ ಮೊಯ್ಲಿ