ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಾಯೋಮುನ್ನ ಬಡವರ ಕಣ್ಣೀರೊರೆಸಬೇಕು: ಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಯೋಮುನ್ನ ಬಡವರ ಕಣ್ಣೀರೊರೆಸಬೇಕು: ಗೌಡ
NRB
"ತೃತೀಯ ರಂಗವನ್ನು ಜನತೆ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ತಮಗಿದೆ. ಆದರೆ ಇಲ್ಲಿ ಪ್ರಧಾನಿ ಯಾರು ಎಂಬುದು ಮುಖ್ಯವಲ್ಲ. ಬದಲಾಗಿ ಸಾಯುವ ಮುನ್ನ ಬಡವರ ಕಣ್ಣೀರು ಒರೆಸಬೇಕೆಂಬುದು ತನ್ನ ಉದ್ದೇಶವಾಗಿದೆ" ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಔಪಚಾರಿಕವಾಗಿ ಮಾತನಾಡುತ್ತಿದ್ದ ಅವರು ಕೋಮುವಾದದ ವಿಷಬೀಜವನ್ನು ಬಿತ್ತುವ ಬಿಜೆಪಿಯನ್ನು ಕಿತ್ತೊಗೆಯುವವರೆಗೆ ತಮ್ಮ ಹೋರಾಟ ನಿಲ್ಲದು ಎಂದು ಮಾಜಿ ಪ್ರಧಾನಿಗಳು ನುಡಿದರು.

ನಗರದಲ್ಲಿ ತೃತೀಯ ರಂಗದ ಪರ ಪ್ರಚಾರಕ್ಕೆ ಆಗಮಿಸಿದ ಅವರು, ದೇಶದ ರೈತರ ಸ್ಥಿತಿಗತಿ ತಿಳಿಯಲು ವಿಶ್ವಬ್ಯಾಂಕ್‌‌ಗೆ ಹೋಗಬೇಕಾದ ಅಗತ್ಯವಿಲ್ಲ. ಹಳ್ಳಿ ಹಳ್ಳಿಗಳಿಗೆ ಹೋಗಿ ಅಧ್ಯಯನ ಮಾಡಿ ಅರಿಯಬಹುದು ಎಂದಿದ್ದಾರೆ.

ಇದೇ ವೇಳೆ ರಂಗನಾಥ ಮಿಶ್ರಾವರದಿಯನ್ನು ಅನುಷ್ಠಾನಗೊಳಿಸದಿರುವ ಬಗ್ಗೆ ಅತೃಪ್ತಿ ಸೂಚಿಸಿದ ಅವರು, ತೃತೀಯ ರಂಗ ಅಧಿಕಾರಕ್ಕೆ ಬಂದಲ್ಲಿ ಶ್ರೀರಾಮಸೇನೆ ಹಾಗೂ ಬಜರಂಗದಳ ಸಂಘಟನೆಯನ್ನು ಕಿತ್ತೊಗೆಯುವುದಾಗಿ ಪ್ರಕಟಿಸಿದರು.

ಅಲ್ಲದೆ, ಬಡವರು, ಶ್ರೀಮಂತರು ಎನ್ನದೆ ಎಲ್ಲ ವರ್ಗದ ರೈತರ ಸಾಲಮನ್ನಾ ಮಾಡಬೇಕೆಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು,
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಾಯಿ-ನರಿಗಳೆಲ್ಲ ಮಂತ್ರಿಗಳು: ವಾಟಾಳ್ ನಾಗರಾಜ್
ಹತ್ಯೆ ಪ್ರಕರಣ: 11ಮಂದಿಗೆ ಜೀವಾವಧಿ ಸಜೆ
ಮೊಯ್ಲಿ, ಎಚ್‌ಡಿಕೆ ಸೇರಿ 273 ಅಭ್ಯರ್ಥಿಗಳ 'ಹಣೆಬರಹ' ನಿರ್ಧಾರ
ಬೆಂಗಳೂರು: ಬಿಜೆಪಿಗೆ ಮತ ಹಾಕದಂತೆ ಫತ್ವಾ!
ಬೈಂದೂರು: ಸಹಕಾರಿ ಬ್ಯಾಂಕ್ ದರೋಡೆ
ಮನೆ ಬಾಗಿಲು ಕಾಯುವ ಪರಿಸ್ಥಿತಿ ಬರುತ್ತೆ: ದೇವೇಗೌಡ