ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಎಸ್ಎಂಎಸ್‌ ಮೂಲಕ ತಮ್ಮ ಮತಗಟ್ಟೆ ವಿವರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್ಎಂಎಸ್‌ ಮೂಲಕ ತಮ್ಮ ಮತಗಟ್ಟೆ ವಿವರ
ಚುನಾವಣಾ ಆಯೋಗವು ಮತದಾರರಿಗೆ ಎಸ್ಎಂಎಸ್ ಮೂಲಕ ತಮ್ಮ ಮತಗಟ್ಟೆ ವಿವರ ನೀಡುವ ಸೌಲಭ್ಯವನ್ನು ಆರಂಭಿಸಿದೆ. ಬೆಂಗಳೂರು ನಗರ ವ್ಯಾಪ್ತಿಯ ಕ್ಷೇತ್ರಗಳ ಮತದಾರರು ತಮ್ಮ ಭಾವಚಿತ್ರ ಸಹಿತಿ ಮತದಾರರ ಗುರುತುಚೀಟಿ ಸಂಖ್ಯೆಯನ್ನು 9481555555ಕ್ಕೆ ಎಸ್ಎಂಎಸ್ ಮಾಡಿದರೆ ಮತಗಟ್ಟೆಯ ವಿಳಾಸ ಸಹಿತ ವಿವರ ಹೊಂದಿರುವ ಮರು ಎಸ್ಎಂಎಸ್ ಕಳುಹಿಸುತ್ತದೆ.

ಎಸ್ಎಂಎಸ್ ಮ‌ೂಲಕ ವಿವರಣೆ ನೀಡಿರುವ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಎಂ.ಎನ್. ವಿದ್ಯಾಶಂಕರ್ ಹೇಳಿದ್ದಾರೆ.

ದೇಶದ ಅಭಿವೃದ್ಧಿ ದೃಷ್ಟಿಯಲ್ಲಿ ಪ್ರತಿಯೊಬ್ಬ ಮತದಾರನ ಮತವು ಪ್ರಾಮುಖ್ಯವಾಗಿದ್ದು. ಪ್ರಜ್ಞಾಪೂರ್ವಕವಾಗಿ ಚಲಾಯಿಸುವ ಒಂದು ಮತ ದೇಶದ ಹೊಸ ಕ್ರಾಂತಿಗೆ ಕಾರಣವಾಗಬಹುದು. ಕೋಟಿ ಜನರ ಮನದಾಳದ ಅಕಾಂಕ್ಷಿ ಅನುಷ್ಠಾನಗೊಳಿಸಬಲ್ಲ ರಾಜಕೀಯ ನಾಯಕರನ್ನು ಆಯ್ಕೆ ಮಾಡುವ ಹಕ್ಕಿರುವುದು ಜನರ ಕೈಯಲ್ಲಿ.

ಆರ್ಥಿಕ ಕುಸಿತ, ಬಡತನ, ಸಂಕಷ್ಟಗಳಿಂದ ಭಾರತೀಯರನ್ನು ಮುಕ್ತರಾಗಿಸುವ ಪ್ರಾಮಾಣಿಕರು, ನಿಷ್ಕಳಂಕರನ್ನು ಆಯ್ಕೆ ಮಾಡಿ ಭಾರತವನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಸಾಲಿಗೆ ಸೇರಿಸುವಲ್ಲಿ ಮತದಾರನ ಆಯ್ಕೆಯೂ ಪ್ರಮುಖವಾಗಿದೆ.

15ನೇ ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಚಿಂತಿಸಿ, ಉತ್ತಮ ನಾಯಕನಿಗೆ ಮತ ಚಲಾಯಿಸಿ, ದೇಶದ ಭವಿಷ್ಯವನ್ನು ನಿರ್ಣಯಿಸುವ ಮಹೋನ್ನತ ಕ್ಷಣವನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ಬಳಸುವುದು ಮತದಾರರ ಜವಾಬ್ದಾರಿಯಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾಯೋಮುನ್ನ ಬಡವರ ಕಣ್ಣೀರೊರೆಸಬೇಕು: ಗೌಡ
ನಾಯಿ-ನರಿಗಳೆಲ್ಲ ಮಂತ್ರಿಗಳು: ವಾಟಾಳ್ ನಾಗರಾಜ್
ಹತ್ಯೆ ಪ್ರಕರಣ: 11ಮಂದಿಗೆ ಜೀವಾವಧಿ ಸಜೆ
ಮೊಯ್ಲಿ, ಎಚ್‌ಡಿಕೆ ಸೇರಿ 273 ಅಭ್ಯರ್ಥಿಗಳ 'ಹಣೆಬರಹ' ನಿರ್ಧಾರ
ಬೆಂಗಳೂರು: ಬಿಜೆಪಿಗೆ ಮತ ಹಾಕದಂತೆ ಫತ್ವಾ!
ಬೈಂದೂರು: ಸಹಕಾರಿ ಬ್ಯಾಂಕ್ ದರೋಡೆ