ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜ್ಯದಲ್ಲಿ ಶೇ.51ರಷ್ಟು ಮತದಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯದಲ್ಲಿ ಶೇ.51ರಷ್ಟು ಮತದಾನ
ರಾಜ್ಯದ 17ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ಸಂಜೆ 5ಗಂಟೆಗೆ ಮುಕ್ತಾಯಗೊಂಡ ಮತದಾನದಲ್ಲಿ ಸುಮಾರು ಶೇ.51ರಷ್ಟು ಮತದಾನವಾಗಿದ್ದು, ಚಿಕ್ಕೋಡಿಯಲ್ಲಿ ಅತಿ ಹೆಚ್ಚು ಶೇ.40ರಷ್ಟು, ರಾಯಚೂರು ಶೇ.30ರಷ್ಟು ಕಡಿಮೆ ಮತದಾನ ದಾಖಲಾಗಿದೆ.

ಈ ಬಾರಿ ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದಿದ್ದಿರು ಕೂಡ ಹಲವೆಡೆ ಮತಯಂತ್ರ ಕೈಕೊಡುವ ಮೂಲಕ ಬೀಸಿಲ ಬೇಗೆಯಲ್ಲಿ ಮತದಾರರು ಪರದಾಡುವಂತಾಗಿತ್ತು. ಕೊಪ್ಪಳದಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಘಟನೆ ನಡೆದಿದೆ.

ಅಲ್ಲದೇ ಗುರುತು ಚೀಟಿ ಹೊಂದಿದ್ದರು ಕೂಡ, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಸದಾಶಿವನಗರದಲ್ಲಿ ನಟಿ ರಮ್ಯಾಗೆ ಮತದಾನ ಮಾಡಲು ಅವಕಾಶ ನೀಡಿಲ್ಲ.

ಚುನಾವಣಾಧಿಕಾರಿ ನಿಧನ-ಮತದಾನ ತಾತ್ಕಾಲಿಕ ಸ್ಥಗಿತ: ನೆಲಮಂಗಲದ ಗೆದ್ದನಹಳ್ಳಿ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚುನಾವಣಾಧಿಕಾರಿ ಟಿ.ಬಿ.ಕೃಷ್ಣಪ್ಪ ಅವರು ಎದೆನೋವಿನಿಂದ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಮತಗಟ್ಟೆಯಲ್ಲಿ ತಾತ್ಕಾಲಿಕವಾಗಿ ಮತದಾನ ಸ್ಥಗಿತಗೊಳಿಸಲಾಗಿತ್ತು.

ಲೋಕಸಭಾ ಕ್ಷೇತ್ರ ಶೇಕಡಾವಾರು ಮತದಾನ:

ಚಿಕ್ಕೋಡಿ-ಶೇ.63.5

ಬೆಳಗಾವಿ-ಶೇ.49

ಬಿಜಾಪುರ (ಪರಿಶಿಷ್ಟ ಜಾತಿ)-ಶೇ.43

ಗುಲ್ಬರ್ಗಾ (ಪ.ಜಾ.)-ಶೇ.45

ರಾಯಚೂರು (ಪ.ಪಂಗಡ)-ಶೇ.42

ಬೀದರ್-ಶೇ.48

ಕೊಪ್ಪಳ-ಶೇ.48

ಬಳ್ಳಾರಿ (ಪ.ಪಂಗಡ)-ಶೇ.58

ಉತ್ತರ ಕನ್ನಡ -ಶೇ.53

ಚಿತ್ರದುರ್ಗ (ಪ.ಜಾತಿ)-ಶೇ.49

ತುಮಕೂರು-ಶೇ.56

ಬೆಂಗಳೂರು ಗ್ರಾಮಾಂತರ- ಶೇ.60

ಬೆಂಗಳೂರು ಉತ್ತರ-ಶೇ.45

ಬೆಂಗಳೂರು ಸೆಂಟ್ರಲ್-ಶೇ.45

ಬೆಂಗಳೂರು ದಕ್ಷಿಣ-ಶೇ.50

ಚಿಕ್ಕಬಳ್ಳಾಪುರ-ಶೇ.60

ಕೋಲಾರ(ಪ.ಜಾತಿ)-ಶೇ.55
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯದ ಆಡಳಿತಕ್ಕೆ ಮೇಜರ್ ಸರ್ಜರಿ: ಯಡಿಯೂರಪ್ಪ
ಮಾರಾಮಾರಿ: ಬಂಗಾರಪ್ಪ ಮೇಲೆ ಕಲ್ಲೆಸೆತ
ಮೀಸಲಾತಿಗೆ ಯಡಿಯೂರಪ್ಪ ಅಡ್ಡಗಾಲು: ಸಿದ್ದರಾಮಯ್ಯ
ರೈತರನ್ನು ಕೊಲ್ಲುವ ಕಟುಕ ನಾನಲ್ಲ: ಯಡಿಯೂರಪ್ಪ
ರಾಜ್ಯದ 17 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ
ಎಸ್ಎಂಎಸ್‌ ಮೂಲಕ ತಮ್ಮ ಮತಗಟ್ಟೆ ವಿವರ