ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಡವರ ಬದುಕು ಪ್ರಕಾಶಿಸಬೇಕು: ರಾಹುಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಡವರ ಬದುಕು ಪ್ರಕಾಶಿಸಬೇಕು: ರಾಹುಲ್
ದೇಶದ ಪ್ರತಿ ಬಡವರ ಬದುಕು ಪ್ರಕಾಶಿಸಬೇಕು. ಒಬ್ಬ ವ್ಯಕ್ತಿ ಬಡವನಾಗಿ ಉಳಿದರು ಭಾರತ ಪ್ರಕಾಶಿಸಲು ಸಾಧ್ಯವಿಲ್ಲ-ಹೀಗೆಂದವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ.

ನಗರದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಎನ್‌ಡಿಎ ಸರ್ಕಾರದ ಆಡಳಿತದಲ್ಲಿ ದೇಶದ ಕೆಲವರ ಬದುಕು ಮಾತ್ರ ಪ್ರಕಾಶಿಸುತ್ತಿತ್ತು. ಬಡವರು ಇನ್ನಷ್ಟು ಬಡವರಾದರು. ಆದರೂ ಭಾರತ ಪ್ರಕಾಶಿಸುತ್ತಿದೆ ಎಂಬ ಘೋಷಣೆಯ ಮೂಲಕ ಜನರನ್ನು ಮರಳು ಮಾಡಿದರು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಆದರೆ ಯುಪಿಎ ಕಳೆದ ಐದು ವರ್ಷಗಳ ಅವಧಿಯಲ್ಲಿ ಬಡವರು, ಹಿಂದುಳಿದ ವರ್ಗಗಳ, ಆದಿವಾಸಿಗಳ ಸರ್ಕಾರವಾಗಿ ಕಾರ್ಯ ನಿರ್ವಹಿಸಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

ಬಡವರ ಮತ್ತು ಜನತೆಯ ಹಿತದೃಷ್ಟಿಯಿಂದ ಚುನಾವಣೆ ಪೂರ್ವ ನೀಡಿದ ಭರವಸೆಗಳನ್ನು ಈಡೇರಿಸಿದ ಸರ್ಕಾರ ಬೇರೊಂದಿಲ್ಲ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಗ್ರಾಮೀಣ ಭಾಗದ ಬಡಜನರಿಗೆ ವರ್ಷದಲ್ಲಿ 100 ದಿನಗಳ ಉದ್ಯೋಗ ಖಾತರಿಗೊಳಿಸಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ. ನಿರುದ್ಯೋಗಿ ಯುವಕರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ, 2 ರೂ.ಗೆ ಅಕ್ಕಿ, 24 ಗಂಟೆ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಕಳೆದ 10 ತಿಂಗಳಲ್ಲಿ ಯಾವುದನ್ನು ಜಾರಿಗೆ ತರದೆ ಜನತೆಗೆ ದ್ರೋಹವೆಸಗಿಸಿದ್ದಾರೆ ಎಂದು ದೂರಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂ.ದ: ಮರುಚುನಾವಣೆಗೆ ಕಾಂಗ್ರೆಸ್ ಆಗ್ರಹ
ಬಂಗಾರಪ್ಪ ಅಹಂಕಾರದ ರಾಜಕಾರಣಿ: ಶಾಸಕ ಸಂಗಮೇಶ್
ನಕ್ಸಲರ ಮತ ಬಹಿಷ್ಕಾರ ಕರೆಗೆ ಬೆಲೆ ಸಿಗದು: ಆಚಾರ್ಯ
ಘಟಾನುಘಟಿಗಳ 'ಹಣೆಬರಹ' ಮತಪೆಟ್ಟಿಗೆಯಲ್ಲಿ ಭದ್ರ
ಬಿಜೆಪಿಯಿಂದ ಅಕ್ರಮ ಹೆಂಡ ದಾಸ್ತಾನು: ಕಾಗೋಡು
ಸಿವಿಲ್ ಕೋರ್ಟ್ ಸಂಕೀರ್ಣದಲ್ಲಿ ಅಗ್ನಿ ದುರಂತ