ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನೌಶಾದ್ ಹತ್ಯೆ ಪ್ರಕರಣ: 6 ಮಂದಿ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೌಶಾದ್ ಹತ್ಯೆ ಪ್ರಕರಣ: 6 ಮಂದಿ ಬಂಧನ
ನಟೋರಿಯಸ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಿಕಟವರ್ತಿ ರಶೀದ್ ಮಲಬಾರಿ ಪರ ವಕೀಲ ನೌಶಾದ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಆರು ಮಂದಿಯನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಮಂಗಳೂರಿನ ಪಳ್ನೀರ್ ಸಮೀಪ ಮಲಬಾರಿ ಪರ ವಕೀಲರಾಗಿದ್ದ ಭಟ್ಕಳ ಮೂಲದ ನೌಶಾದ್ ಅವರನ್ನು ದುಷ್ಕರ್ಮಿಗಳು ಏಪ್ರಿಲ್ 9ರಂದು ಹತ್ಯೆಗೈದಿದ್ದರು. ಈ ಕೊಲೆಗೆ ತಾನೇ ಮಾಡಿಸಿರುವುದಾಗಿ ಭೂಗತ ಪಾತಕಿ ರವಿ ಪೂಜಾರಿ ಮಾಧ್ಯಮಗಳಿಗೆ ತಿಳಿಸಿದ್ದ.

ರವಿ ಪೂಜಾರಿ ಹೇಳಿಕೆಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ದಕ್ಷಿಣ ಕನ್ನಡ ಪೊಲೀಸರು ಈಗಾಗಲೇ ಸುಮಾರು ನೂರಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಿದ್ದರು. ಬುಧವಾರ ಸಂಜೆ ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತರನ್ನು ಬೆಳ್ತಂಗಡಿ ಆಸುಪಾಸಿನ ನಿವಾಸಿಗಳಾದ ದಿನೇಶ್, ರಿತೇಶ್, ಪ್ರತಾಪ್, ಗಣೇಶ್, ಸುಬ್ರಹ್ಮಣ್ಯ ಹಾಗೂ ಶಿವಪ್ರಕಾಶ್ ಎಂದು ಗುರುತಿಸಲಾಗಿದ್ದು, ಇವರೆಲ್ಲ ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗ್‌ಗೆ ಸಂಪರ್ಕ ಹೊಂದಿದವರೆನ್ನಲಾಗಿದೆ. ಬಂಧಿತರಿಂದ ಮೂರು 9ಎಂಎಂ ಪಿಸ್ತೂಲ್, 8ಸಜೀವ ಗುಂಡು, 3.5ಲಕ್ಷ ರೂ.ನಗದು ಹಾಗೂ ಕಾರೊಂದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಹೊಸೂರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಡವರ ಬದುಕು ಪ್ರಕಾಶಿಸಬೇಕು: ರಾಹುಲ್
ಬೆಂ.ದ: ಮರುಚುನಾವಣೆಗೆ ಕಾಂಗ್ರೆಸ್ ಆಗ್ರಹ
ಬಂಗಾರಪ್ಪ ಅಹಂಕಾರದ ರಾಜಕಾರಣಿ: ಶಾಸಕ ಸಂಗಮೇಶ್
ನಕ್ಸಲರ ಮತ ಬಹಿಷ್ಕಾರ ಕರೆಗೆ ಬೆಲೆ ಸಿಗದು: ಆಚಾರ್ಯ
ಘಟಾನುಘಟಿಗಳ 'ಹಣೆಬರಹ' ಮತಪೆಟ್ಟಿಗೆಯಲ್ಲಿ ಭದ್ರ
ಬಿಜೆಪಿಯಿಂದ ಅಕ್ರಮ ಹೆಂಡ ದಾಸ್ತಾನು: ಕಾಗೋಡು