ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನೀರಸ ಮತದಾನಕ್ಕೆ ಆಯೋಗ ಹೊಣೆ: ಕುಮಾರಸ್ವಾಮಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೀರಸ ಮತದಾನಕ್ಕೆ ಆಯೋಗ ಹೊಣೆ: ಕುಮಾರಸ್ವಾಮಿ
ರಾಜ್ಯದ 17 ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಮಂದಗತಿಯ ಮತದಾನಕ್ಕೆ ಚುನಾವಣಾ ಆಯೋಗವೇ ನೇರ ಹೊಣೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಇಲ್ಲಿನ ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಮತದಾರರಿಗೆ ಸರಿಯಾಗಿ ಸ್ಪಂದಿಸಿಲ್ಲ ಹಾಗೂ ಅವರ ಮೇಲೆ ದೌರ್ಜನ್ಯ ಪ್ರವೃತ್ತಿ ತೋರಿಸಿದರ ಹಿನ್ನೆಲ್ಲೆಯಲ್ಲಿ ಮತದಾನ ನೀರಸವಾಗಿದೆ ಎಂದು ಹೇಳಿದರು.

ಕೆಲವು ಕ್ಷೇತ್ರಗಳಲ್ಲಿ ಮತದಾನ ಬಹಿಷ್ಕಾರ, ಗುರುತಿನ ಚೀಟಿ ಇದ್ದರೂ ಮತದಾನಕ್ಕೆ ಅವಕಾಶ ಸಿಗದಿರುವುದು ಹಾಗೂ ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ, ಇವೆಲ್ಲಾ ಚುನಾವಣಾ ಆಯೋಗದ ಬೇಜವ್ದಾರಿತನ ಎದ್ದು ಕಾಣುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಳಿದ 11 ಕ್ಷೇತ್ರಗಳಿಗೆ ನಡೆಯಲಿರುವ ಎರಡನೆ ಹಂತದ ಚುನಾವಣೆಯಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಬೇಕು, ಒಂದೊಂದು ಮತವು ಅತ್ಯಮೂಲ್ಯವಾದದ್ದು ಹಾಗಾಗಿ ಎಲ್ಲಾ ಮತದಾರರು ಕಡ್ಡಾಯವಾಗಿ ಮತಚಲಾಯಿಸಿ ಎಂದು ಅವರು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗುಲ್ಬರ್ಗಾ ಜೈಲಿನಿಂದ ಇಬ್ಬರು ಕೈದಿಗಳು ಪರಾರಿ
ಬಿಜೆಪಿ ದಲಿತರೊಬ್ಬರನ್ನು ಸಿಎಂ ಮಾಡಲಿ: ಗುಲಾಂ
14 ಕ್ಷೇತ್ರಗಳಲ್ಲಿ ಜಯ ನಿಶ್ಚಿತ: ಯಡಿಯೂರಪ್ಪ
ಭವಿಷ್ಯ ಕೇಳುತ್ತಿದ್ರೆ.ಮನೆಯಲ್ಲಿ ಕೂತ್ಕೋಬೇಕಾಗುತ್ತೆ: ದೇವೇಗೌಡ
ನೌಶಾದ್ ಹತ್ಯೆ ಪ್ರಕರಣ: 6 ಮಂದಿ ಬಂಧನ
ಬಡವರ ಬದುಕು ಪ್ರಕಾಶಿಸಬೇಕು: ರಾಹುಲ್