ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರು: ಸಂಸದೆ ತೇಜಸ್ವಿನಿ ಹಣ ದರೋಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು: ಸಂಸದೆ ತೇಜಸ್ವಿನಿ ಹಣ ದರೋಡೆ
ನಿನ್ನೆ ನೈಸ್ ರಸ್ತೆಯ ಟೋಲ್‌ಗೇಟ್ ಸಮೀಪ ಚುನಾವಣಾ ಅಧಿಕಾರಿಗಳ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಸಂಸದೆ ತೇಜಸ್ವಿನಿಗೌಡ ಅವರಿಗೆ ಸೇರಿದ ಹಣವನ್ನು ಅಪಹರಿಸಿದ್ದ ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ಚುನಾವಣೆಯ ನಂತರ ತಲಘಟ್ಟಪುರ ಪೊಲೀಸರು ನಡೆಸಲಿದ್ದಾರೆ.

ಸಂಬಂಧ ಸಂಸದೆ ತೇಜಸ್ವಿನಿ ಗೌಡ ಅವರ ಕಾರ್ಯದರ್ಶಿ ಕಾತ್ಯಾಯಿನಿ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಚುನಾವಣೆಯ ನಂತರ ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ರಾಮನಗರದ ಪಿಎಸ್‌ಐ ಕುಮಾರ್ ಹೇಳಿದ್ದಾರೆ.

ಚುನಾವಣಾ ಅಧಿಕಾರಿಗಳ ಸೋಗಿನಲ್ಲಿ ಬಂದ ಮೂರು ಅಪರಿಚಿತರು ತೇಜಸ್ವಿನಿ ಗೌಡ ಅವರು ಚುನಾವಣೆ ಖರ್ಚಿಗಾಗಿ ತಮ್ಮ ಆಪ್ತ ಕಾರ್ಯದರ್ಶಿ ಕಾತ್ಯಾಯಿನಿಗೆ 12.5ಲಕ್ಷ ರೂ. ಹಣವನ್ನು ನೀಡಿ ಚಾಲಕನೊಂದಿಗೆ ರಾಮನಗರಕ್ಕೆ ಕಳುಹಿಸಿದ್ದರು.

ಈ ಸಂದರ್ಭದಲ್ಲಿ ಅಪರಿಚಿತ ದುಷ್ಕರ್ಮಿಗಳು ನೈಸ್ ರಸ್ತೆಯ ಟೋಲ್‌ಗೇಟ್ ಬಳಿ ಈ ದುಷ್ಕೃತ್ಯ ಎಸಗಿದ್ದಾರೆ. ಪಾರ್ಟಿ ಫಂಡ್‌ನಿಂದ 25ಲಕ್ಷ ರೂ.ಗಳನ್ನು ನೀಡಿದ್ದು, ಇದರಲ್ಲಿ ರಾಮನಗರ, ಚನ್ನಪಟ್ಟಣ ಪ್ರದೇಶಗಳಲ್ಲಿ ಚುನಾವಣೆಗೆ ಬಳಸಿದ್ದ ವಾಹನ ಲೆಕ್ಕಚಾರಕ್ಕಾಗಿ 12.5 ರೂ.ಗಳನ್ನು ಇಟ್ಟು ಚಾಲಕನೊಂದಿಗೆ ಆಪ್ತ ಸಹಾಯಕಿ ಕಾತ್ಯಾಯಿನಿಯನ್ನು ಕಳುಹಿಸಿ ಕೊಡಲಾಗಿತ್ತು. ಆದರೆ ಚುನಾವಣಾ ಅಧಿಕಾರಿಗಳ ಸೋಗಿನಲ್ಲಿ ಬಂದ ಅಧಿಕಾರಿಗಳು ಈ ದುಷ್ಕತ್ಯವನ್ನು ಎಸಗಿದ್ದಾರೆ ಎಂದು ಸಂಸದೆ ತೇಜಸ್ವಿನಿ ಗೌಡ ದೂರಿನಲ್ಲಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೌಡ್ರು ಹಗಲು ಕನಸು ಕಾಣುತ್ತಿದ್ದಾರೆ: ಕಾಂಗ್ರೆಸ್
ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಫಲಿತಾಂಶ: ದೇವೇಗೌಡ
ಹಲ್ಲೆ: ಶಾಸಕ ಕಾಗೆ ವಿರುದ್ಧ ಕೊಲೆಯತ್ನ ಮೊಕದ್ದಮೆ
ಬಳ್ಳಾರಿಯಲ್ಲಿ ನಾಲ್ವರು ಸಜೀವ ದಹನ
ಭದ್ರಾವತಿ ಗಲಾಟೆ-ಸಿಬಿಐ ತನಿಖೆಗೆ ಬಂಗಾರಪ್ಪ ಆಗ್ರಹ
ಶೃಂಗೇರಿ: ನಕ್ಸಲ್ ಬೆಂಬಲಿಗ ಸುಂದರ್ ಸೆರೆ