ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ನನ್ನದು ಇಂಟರ್‌ನ್ಯಾಶನಲ್ ಲೆವಲ್': ಬಂಗಾರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ನನ್ನದು ಇಂಟರ್‌ನ್ಯಾಶನಲ್ ಲೆವಲ್': ಬಂಗಾರಪ್ಪ
ಮುಖ್ಯಮಂತ್ರಿ ಯಡಿಯೂರಪ್ಪ ಅಥವಾ ಅವರ ಮಗ ರಾಘವೇಂದ್ರ ಜೊತೆ ಸಾರ್ವಜನಿಕವಾಗಿ ಚರ್ಚೆ ನಡೆಸಲು ಇಷ್ಟಪಡುವುದಿಲ್ಲ. ನಾನು ರಾಜ್ಯ ರಾಜಕಾರಣ ಮೀರಿ ಬೆಳೆದಿದ್ದೇನೆ. ನನ್ನದೇನಿದ್ದರೂ ಇಂಟರ್‌ನ್ಯಾಷನಲ್ ಲೇವಲ್. ಹೀಗೆಂದವರು ಮಾಜಿ ಮುಖ್ಯಮಂತ್ರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಬಂಗಾರಪ್ಪ.

ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಆಂದೋಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಡಿಯೂಪ್ಪನವರು ಸವಾಲು ಹಾಕಿದರೆಂದು ಚರ್ಚೆಗೆ ಹೋದರೆ ನಾನು ಅಂತಾರಾಷ್ಟ್ರೀಯ ವಿಚಾರಗಳನ್ನು ಮಾತನಾಡುವಾಗ ಅವರು ಚಾಪೆ ಮೇಲೆ ಕುಳಿತು ಕೇಳಬೇಕಾಗುತ್ತದೆ ಇಂತಹ ಪರಿಸ್ಥಿತಿ ಅವರಿಗೆ ಬರುವುದು ಬೇಡ ಎಂದರು.

ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರುಗಳು ಇನ್ನು ಪಂಚಾಯತ್ ಮಟ್ಟದ ಚರ್ಚೆಗಳಲ್ಲಿಯೇ ಇದ್ದಾರೆ. ಆದ್ದರಿಂದ ಅವರೊಂದಿಗೆ ತಾನೂ ಚರ್ಚೆ ನಡೆಸುವುದು ಸಾಧ್ಯವಿಲ್ಲ. ತನ್ನೊಂದಿಗೆ ಸಾರ್ವಜನಿಕವಾಗಿ ಚರ್ಚೆ ನಡೆಸುವ ಯೋಗ್ಯತೆ ಅವರಿಗಿಲ್ಲ ಎಂದು ವ್ಯಂಗ್ಯವಾಡಿದರು.

ದೇಶಾದ್ಯಂತ ಗಲಭೆಗೆ ಕಾರಣವಾದ ಸಂಘ ಪರಿವಾರದ ಮುಖ್ಯಸ್ಥರಾಗಿರುವ ಎಲ್.ಕೆ. ಅಡ್ವಾಣಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದು ಎಂದರೆ ದೇಶದ ಆಡಳಿತವನ್ನು ಸಂಘ ಪರಿವಾರದ ಕೈಗೆ ಒಪ್ಪಿಸಿದಂತೆ ಎಂಬುದನ್ನು ಮತದಾರರು ನೆನಪಿಟ್ಟುಕೊಳ್ಳಬೇಕೆಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ರೆಡ್ಡಿ ಬ್ರದರ್ಸ್' ಗಣಿಗಾರಿಕೆ ಸ್ಥಗಿತಕ್ಕೆ ಕೇಂದ್ರದ ಆದೇಶ
2ನೇ ಹಂತದ ಚುನಾವಣೆ-ರಾಜ್ಯಾದ್ಯಂತ ಅಬ್ಬರದ ಪ್ರಚಾರ
ಬೆಂಗಳೂರು: ಸಂಸದೆ ತೇಜಸ್ವಿನಿ ಹಣ ದರೋಡೆ
ಗೌಡ್ರು ಹಗಲು ಕನಸು ಕಾಣುತ್ತಿದ್ದಾರೆ: ಕಾಂಗ್ರೆಸ್
ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಫಲಿತಾಂಶ: ದೇವೇಗೌಡ
ಹಲ್ಲೆ: ಶಾಸಕ ಕಾಗೆ ವಿರುದ್ಧ ಕೊಲೆಯತ್ನ ಮೊಕದ್ದಮೆ