ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚುನಾವಣೆ ನಂತರ ಬಿಜೆಪಿ ನಾಶ: ವೀರಪ್ಪ ಮೊಯ್ಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆ ನಂತರ ಬಿಜೆಪಿ ನಾಶ: ವೀರಪ್ಪ ಮೊಯ್ಲಿ
ಚುನಾವಣೆಯ ನಂತರ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ನಿರ್ನಾಮವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಭವಿಷ್ಯ ನುಡಿದಿದ್ದಾರೆ.

ಮಂಗಳೂರಿನ ನೆಹರೂ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಪ್ರಸ್ತುತ ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಬಿಜೆಪಿ ಪತನವಾಗಲಿದೆ ಎಂದರು. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆಯಿಲ್ಲ. ನೆಲೆಸಿಕ್ಕ ಕರ್ನಾಟಕದಲ್ಲಿ ಉತ್ತಮ ಆಡಳಿತ ಮಾಡದೆ ಜನವಿರೋಧಿ ಅಲೆಯಲ್ಲಿ ಬೇಯುತ್ತಿದೆ ಎಂದರು. ಶಾಸಕರುಗಳನ್ನು ಖರೀದಿ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಮಸಿ ಬಳಿದ ಬಿಜೆಪಿ ಪಕ್ಷದ ಆಪರೇಶನ್ ಕಮಲ ಅದೇ ಪಕ್ಷಕ್ಕೆ ತಿರುಗುಬಾಣವಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಬೃಹತ್ ಶಕ್ತಿಯಾಗಿ ಹೊರಹೊಮ್ಮಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಭಾರೀ ಮುಖಭಂಗವಾಗಲಿದೆ ಎಂದು ಮೊಯ್ಲಿ ತಿಳಿಸಿದರು. ಜಾತಿ, ಜಾತಿಗಳ ನಡುವೆ ವಿಷಬೀಜ ಬಿತ್ತಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಮತಗಳನ್ನು ಪಡೆಯುವ ಹುನ್ನಾರ ನಡೆಸಿರುವ ಬಿಜೆಪಿ ಪಕ್ಷಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯುಪಿಎನಿಂದ ಮಾತ್ರ ಸ್ಥಿರ ಸರ್ಕಾರ: ಸೋನಿಯಾ
'ನನ್ನದು ಇಂಟರ್‌ನ್ಯಾಶನಲ್ ಲೆವಲ್': ಬಂಗಾರಪ್ಪ
'ರೆಡ್ಡಿ ಬ್ರದರ್ಸ್' ಗಣಿಗಾರಿಕೆ ಸ್ಥಗಿತಕ್ಕೆ ಕೇಂದ್ರದ ಆದೇಶ
2ನೇ ಹಂತದ ಚುನಾವಣೆ-ರಾಜ್ಯಾದ್ಯಂತ ಅಬ್ಬರದ ಪ್ರಚಾರ
ಬೆಂಗಳೂರು: ಸಂಸದೆ ತೇಜಸ್ವಿನಿ ಹಣ ದರೋಡೆ
ಗೌಡ್ರು ಹಗಲು ಕನಸು ಕಾಣುತ್ತಿದ್ದಾರೆ: ಕಾಂಗ್ರೆಸ್