ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಂದಕುಮಾರ್: ಆರೋಪ ಸಾಬೀತಾದರೆ 2ವರ್ಷ ಜೈಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಂದಕುಮಾರ್: ಆರೋಪ ಸಾಬೀತಾದರೆ 2ವರ್ಷ ಜೈಲು
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಆರೋಪದ ಮೇಲೆ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ನಂದಕುಮಾರ್ ಅವರನ್ನು ಬಂಧಿಸಿರುವ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ನಂದಕುಮಾರ್ ವಿರುದ್ಧ ಜನಪ್ರತಿನಿಧಿ ಕಾಯ್ದೆ ಕಲಂ 129 ಮತ್ತು ಭಾರತೀಯ ದಂಡ ಸಂಹಿತೆ 171 (ಬಿ) ಮತ್ತು (ಸಿ) ಕಲಂ ಅನ್ವಯ ಒಟ್ಟು ಮೂರು ಕೇಸುಗಳನ್ನು ದಾಖಲು ಮಾಡಲಾಗಿದೆ. ಈ ನಡುವೆ ನಂದಕುಮಾರ್ ಪ್ರಕರಣದ ವಿಚಾರಣೆಗೆ ಕೇಂದ್ರ ಚುನಾವಣಾ ಆಯುಕ್ತ ಖುರೇಷಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಯಾವುದೇ ಸರ್ಕಾರಿ ಅಧಿಕಾರಿ ರಾಜಕೀಯ ಪಕ್ಷವೊಂದರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದು ನಿಯಮದ ಉಲ್ಲಂಘನೆ ಹಾಗೂ ಅಪರಾಧ. ನಂದಕುಮಾರ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದ್ದು, ವರದಿಯನ್ನು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿದ್ಯಾಶಂಕರ್ ತಿಳಿಸಿದ್ದಾರೆ. ಒಂದು ವೇಳೆ ಹಿರಿಯ ಐಎಎಸ್ ಅಧಿಕಾರಿ ನಂದಕುಮಾರ್ ಅವರ ಮೇಲಿನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಆರೋಪದ ಸಾಬೀತಾದರೆ ಎರಡುವರೆ ವರ್ಷ ಜೈಲು ಶಿಕ್ಷೆಯಾಗಲಿದೆ.

ಈ ಮಧ್ಯೆ, ನಂದಕುಮಾರ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು ಎಂಬುದರಲ್ಲಿ ಸತ್ಯಾಂಶವಿಲ್ಲ. ನಂದಕುಮಾರ್ ಸಂಬಂಧಿಕರ ಮನೆಗೆ ಹೋಗಿರಬಹುದು, ಅದಕ್ಕೂ ಅನುಮತಿ ಪಡೆದು ಹೋಗಿದ್ದರು ಎಂಬ ಮಾಹಿತಿ ನನಗಿದೆ. ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ತನಿಖೆ ನಡೆಸಲಿ, ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಡಿಯೂರಪ್ಪ ಮೇಲೆ ಚಪ್ಪಲಿ ತೂರುವ ಯತ್ನ!
ಹಣ ಹಂಚಿಕೆ-ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ: ದೇವೇಗೌಡ
ರೆಡ್ಡಿ ಸಹೋದರರ ರಾಜೀನಾಮೆಗೆ ಜೆಡಿಎಸ್ ಪಟ್ಟು
ರಾಜ್ಯದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ
ಜಾತ್ಯತೀತ ಸಮಾಜಕ್ಕೆ ಬಸವ ತತ್ವ ಅಗತ್ಯ: ಠಾಕೂರ್
ಸಂಪುಟ ಪುನರ್ ರಚನೆ ಇಲ್ಲ: ಬಿ.ಎಸ್.ಯಡಿಯೂರಪ್ಪ