ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಡಾ.ವೀರೇಂದ್ರ ಹೆಗ್ಗಡೆಗೆ 'ಬಸವಶ್ರೀ' ಪ್ರಶಸ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾ.ವೀರೇಂದ್ರ ಹೆಗ್ಗಡೆಗೆ 'ಬಸವಶ್ರೀ' ಪ್ರಶಸ್ತಿ
NRB
ಬಸವವೇದಿಕೆ ವರ್ಷಂಪ್ರತಿ ನೀಡುವ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಈ ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕ ಧಾರವಾಡ ಪ್ರೊ.ಎಂ.ವೆಂಕಟೇಶ್ ಕುಮಾರ್ ಅವರಿಗೆ ಲಭಿಸಿದೆ.

ಮೇ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 11ಗಂಟೆಗೆ ನಡೆಯಲಿರುವ ಬಸವಜಯಂತಿ ಸಮಾರಂಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಬೆಂಗಳೂರು ವಿ.ವಿ.ಕುಲಪತಿ ಡಾ.ಎನ್.ಪ್ರಭುದೇವ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆಂದು ವೇದಿಕೆಯ ಕೋಶಾಧ್ಯಕ್ಷ ಎಂ.ರುದ್ರಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಡಾ.ವೀರೇಂದ್ರ ಹೆಗ್ಗಡೆಯವರು ಅಖಿಲ ಭಾರತ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದರೊಂದಿಗೆ 11 ಸಾವಿರಕ್ಕೂ ಹೆಚ್ಚು ಜೋಡಿಗಳಿಗೆ ಸರಳ ಸಾಮೂಹಿಕ ವಿವಾಹದ ಮುಖೇನ ದಾಂಪತ್ಯ ಜೀವನಕ್ಕೆ ಕಾರಣರಾಗಿದ್ದಾರೆ. ಹಾಗೆಯೇ ಪ್ರೊ.ಎಂ.ವೆಂಕಟೇಶ್ ಅವರು ತಮ್ಮ ಹಾಡುಗಾರಿಕೆಯಿಂದ ನಾಡಿನಾದ್ಯಂತ ವಚನ ಹಾಗೂ ದಾಸ ಪದಗಳನ್ನು ಹಾಡಿ ಜನರನ್ನು ಬಸವ ತತ್ವಗಳನ್ನು ಪರಿಚಯಿಸಿರುವ ಕಾರಣದಿಂದಾಗಿ ಈ ಇಬ್ಬರಿಗೆ ಈ ವರ್ಷದ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ನೀಡಲು ನಿರ್ಧರಿಸಿರುವುದಾಗಿ ಬಸವವೇದಿಕೆ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೋದಿ ರಾಜೀನಾಮೆಗೆ ಯುವ ಕಾಂಗ್ರೆಸ್ ಆಗ್ರಹ
ಗಣಿಗಾರಿಕೆ ರದ್ದತಿ ಹಿಂದೆ ಸಿಎಂ ಕೈವಾಡ: ಡಿಕೆಶಿ
ಚಪ್ಪಲಿ ಎಸೆತ-ಘಟನೆ ಹಿಂದೆ ದೇವೇಗೌಡರ ಕೈ: ಯಡಿಯೂರಪ್ಪ
ನಂದಕುಮಾರ್: ಆರೋಪ ಸಾಬೀತಾದರೆ 2ವರ್ಷ ಜೈಲು
ಯಡಿಯೂರಪ್ಪ ಮೇಲೆ ಚಪ್ಪಲಿ ತೂರುವ ಯತ್ನ!
ಹಣ ಹಂಚಿಕೆ-ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ: ದೇವೇಗೌಡ