ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನೀತಿ ಸಂಹಿತೆ: ಡಿಕೆಶಿ ವಿರುದ್ಧ ಪ್ರಕರಣ ದಾಖಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೀತಿ ಸಂಹಿತೆ: ಡಿಕೆಶಿ ವಿರುದ್ಧ ಪ್ರಕರಣ ದಾಖಲು
ಯಾವುದೇ ಮುನ್ಸೂಚನೆ ನೀಡಿದೆ ಅನಧಿಕೃತವಾಗಿ ಇಲ್ಲಿನ ರಿಸಾರ್ಟ್‌ವೊಂದರಲ್ಲಿ ಠಿಕಾಣಿ ಹೂಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ದ ಚುನಾವಣೆ ಆಯೋಗ ಪ್ರಕರಣ ದಾಖಲಿಸಿದೆ.

ರಾಜ್ಯದಲ್ಲಿ ಏಪ್ರಿಲ್ 30ಕ್ಕೆ 11ಲೋಕಸಭಾ ಕ್ಷೇತ್ರಗಳಿಗೆ ಅಂತಿಮ ಮತದಾನ ನಡೆಯುವ ಹಿನ್ನೆಲೆಯಲ್ಲಿ, ಮಂಗಳವಾರ ಸಂಜೆ 5ಗಂಟೆಗೆ ರಾಜಕೀಯ ಮುಖಂಡರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿತ್ತು. ಅಲ್ಲದೇ ಕ್ಷೇತ್ರದಿಂದ ಅಭ್ಯರ್ಥಿಗಳು ಸೇರಿದಂತೆ, ರಾಜಕೀಯ ಮುಖಂಡರು ಕ್ಷೇತ್ರ ಬಿಟ್ಟು ತೆರಳುವಂತೆ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.

ಬಹಿರಂಗ ಪ್ರಚಾರ ಸೇರಿದಂತೆ ಹೊರಗಡೆಯಿಂದ ಆಗಮಿಸಿರುವ ಮುಖಂಡರು ಬೇರೆ ಸ್ಥಳಗಳಿಂದ ಜಾಗ ಖಾಲಿ ಮಾಡಬೇಕು. ಆದರೆ, ಡಿಕೆ ಶಿವಕುಮಾರ್ ಅವರು ಮಡಿಕೇರಿಯ ಕುಶಾಲನಗರದಲ್ಲಿರುವ ಕೋದಂಡರಾಮಯ್ಯ ಅವರ ರಿಸಾರ್ಟ್‌ನಲ್ಲಿ ಉಳಿದುಕೊಂಡಿದ್ದು, ನೀತಿ ಸಂಹಿತೆ ಉಲ್ಲಂಘನೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಮಹದೇವಪೇಟೆಯಲ್ಲಿ ಇಬ್ಬರು ಸ್ಥಳೀಯ ನಾಯಕರು ಪ್ರಚಾರ ನಡೆಸುತ್ತಿರುವ ಆರೋಪದ ಮೇಲೆ ಬಂಧಿಸಲಾಗಿತ್ತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಥಮ ಹಂತ-ಮರು ಮತದಾನಕ್ಕೆ ಕಾಂಗ್ರೆಸ್ ಆಗ್ರಹ
ರಾಮಮಂದಿರ ಹೆಸರಲ್ಲಿ ಸಂಗ್ರಹವಾದ ಹಣ ಏನಾಯಿತು?: ಕಾಂಗ್ರೆಸ್
ಜನಾರ್ದನ ರೆಡ್ಡಿ ಸುಳ್ಳು ಹೇಳುವುದು ಬಿಡಲಿ: ಚನ್ನಿಗಪ್ಪ
ಡಾ.ವೀರೇಂದ್ರ ಹೆಗ್ಗಡೆಗೆ 'ಬಸವಶ್ರೀ' ಪ್ರಶಸ್ತಿ
ಮೋದಿ ರಾಜೀನಾಮೆಗೆ ಯುವ ಕಾಂಗ್ರೆಸ್ ಆಗ್ರಹ
ಗಣಿಗಾರಿಕೆ ರದ್ದತಿ ಹಿಂದೆ ಸಿಎಂ ಕೈವಾಡ: ಡಿಕೆಶಿ