ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜ್ಯದ 11 ಕ್ಷೇತ್ರದಲ್ಲಿ ಬಿರುಸಿನ ಮತದಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯದ 11 ಕ್ಷೇತ್ರದಲ್ಲಿ ಬಿರುಸಿನ ಮತದಾನ
ರಾಜ್ಯದ 2ನೇ ಹಾಗೂ ಅಂತಿಮಹಂತದ 11 ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಬಿರುಸಿನ ಮತದಾನ ನಡೆಯುತ್ತಿದ್ದು, ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಬಂಟ್ವಾಳದಲ್ಲಿ, ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್, ರಾಜ್ಯ ಗೃಹಸಚಿವ ವಿ.ಎಸ್.ಆಚಾರ್ಯ ಸೇರಿದಂತೆ ಹಲವು ಗಣ್ಯರು ಮತ ಚಲಾಯಿಸಿದರು.

10ಗಂಟೆಯವರೆಗೆ ಶೇ.8 ಮತದಾನವಾಗಿದೆ. ಶಿವಮೊಗ್ಗ, ದಕ್ಷಿಣಕನ್ನಡ, ದಾವಣಗೆರೆಯಲ್ಲಿ ಬಿರುಸಿನ ಮತದಾನವಾಗುತ್ತಿದ್ದು, ಮಂಡ್ಯದಲ್ಲಿ ಹೆಚ್ಚಿನ ಮತದಾನವಾಗಿದ್ದರೆ, ಧಾರವಾಡದಲ್ಲಿ ನಿಧಾನಗತಿಯಲ್ಲಿ ಮತದಾನ ನಡೆಯುತ್ತಿದೆ.

11ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1.55ಕೋಟಿ ಮತದಾರರನ್ನು ಹೊಂದಿದ್ದು, 78.29ಲಕ್ಷ ಪುರುಷ ಮತದಾರರು, 76.79ಲಕ್ಷ ಮಹಿಳಾ ಮತದಾರರಿದ್ದಾರೆ. 18, 406ಮತಗಟ್ಟೆ ಇದ್ದು, ಅದರಲ್ಲಿ 2,951 ಅತಿಸೂಕ್ಷ್ಮ ಹಾಗೂ 5, 361 ಸೂಕ್ಷ್ಮ ಮತಗಟ್ಟೆಗಳಾಗಿವೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಎರಡನೇ ಹಾಗೂ ಅಂತಿಮ ಹಂತದ ಶಿವಮೊಗ್ಗ, ಚಾಮರಾಜನಗರ, ಹಾವೇರಿ, ಬಾಗಲಕೋಟೆ, ಮೈಸೂರು, ಮಂಡ್ಯ, ಹಾಸನ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಹಾಸನದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶಿವಮೊಗ್ಗ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಮಂಡ್ಯದಿಂದ ಅಂಬರೀಷ್, ಉಡುಪಿಯಿಂದ ಸದಾನಂದ ಗೌಡ, ದಕ್ಷಿಣ ಕನ್ನಡದಿಂದ ಜನಾರ್ದನ ಪೂಜಾರಿ, ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಕಣದಲ್ಲಿರುವ ಘಟಾನುಘಟಿಗಳಾಗಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಂಡ್ಯ: ಜಗ್ಗೇಶ್ ವಿರುದ್ಧ ಅಂಬರೀಷ್ ವಾಗ್ದಾಳಿ
ಶಾಸಕ ಸಿ.ಟಿ.ರವಿಗೆ ಷೋಕಾಸ್ ನೋಟಿಸ್ ಜಾರಿ
ಶಿವಮೊಗ್ಗದಲ್ಲಿ ಮಾರ್ಗರೇಟ್ ವಿರುದ್ಧ ಎಫ್‌ಐಆರ್
ಮೋದಿ ವಜಾಗೊಳಿಸಲು ಮೊಯ್ಲಿ ಬಿಜೆಪಿಗೆ ಆಗ್ರಹ
ನಾಳೆ ಗೌಡ, ಬಂಗಾರಪ್ಪ, ಪೂಜಾರಿ ಭವಿಷ್ಯ ನಿರ್ಧಾರ
ನೈಸ್: ನೋಟಿಸ್ ನೀಡಲು ಹೋದ ಅಧಿಕಾರಿಗಳಿಗೆ ಥಳಿತ