ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಖೋಟಾ ನೋಟು ಜಾಲ-ನಾಲ್ವರ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖೋಟಾ ನೋಟು ಜಾಲ-ನಾಲ್ವರ ಬಂಧನ
ಖೋಟಾ ನೋಟು ಜಾಲವೊಂದನ್ನು ಪತ್ತೆ ಹಚ್ಚಿರುವ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು, ನಾಲ್ವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಬಂಧಿತರಿಂದ ಐದು ನೂರು ರೂ.ಮುಖಬೆಲೆಯ 1.25ಲಕ್ಷ ರೂ.ಮೊತ್ತದ ಖೋಟಾ ನೋಟುಗಳು, ಸ್ಯಾಂಟ್ರೋ ಕಾರು ಹಾಗೂ ಮುದ್ರಣ ಸಾಮಗ್ರಿಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜಾಬೀರ್ ಷರೀಫ್(31), ಕೆಂಗೇರಿ ಉಪನಗರದ ಶ್ರೀಧರ್(24), ಎಸ್.ಆರ್.ನಗರದ ಪುಲಿಕೇಶಿ(42) ಹಾಗೂ ಕಬ್ಬನ್‌ಪೇಟೆಯ ಸುರೇಶ್ ಬಂಧಿತ ಆರೋಪಿಗಳಾಗಿದ್ದಾರೆ. ಜಾಬೀರ್ ಷರೀಫ್, ಶ್ರೀಧರ್ ಇಬ್ಬರು ಸಾರ್ವಜನಿಕರ ಕ್ರೆಡಿಟ್ ಕಾರ್ಡ್‌ಗಳ ವಿವರ ಪಡೆದು, ಈ ಕಾರ್ಡ್ ಮೂಲಕ ಏರ್ ಟಿಕೆಟ್ ಬುಕ್ ಮಾಡಿ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ವಂಚಿಸುತ್ತಿದ್ದರು.

ಇದೇ ಗ್ಯಾಂಗಿನ ಆರೋಪಿಗಳಾದ ಮೈಸೂರು ಮೂಲದ ಜಾವೇದ್ ಪಾಷಾ ಹಾಗೂ ಅಫ್ಜಲ್ ಖಾನ್ ಎಂಬುವರನ್ನು ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಲಖನೌ ಪೊಲೀಸರು ಬಂಧಿಸಿದ್ದಾರೆ. ಲಕ್ನೋ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೌಷಾದ್ ಹತ್ಯೆ-ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ರಾಜ್ಯದ 11 ಕ್ಷೇತ್ರದಲ್ಲಿ ಬಿರುಸಿನ ಮತದಾನ
ಮಂಡ್ಯ: ಜಗ್ಗೇಶ್ ವಿರುದ್ಧ ಅಂಬರೀಷ್ ವಾಗ್ದಾಳಿ
ಶಾಸಕ ಸಿ.ಟಿ.ರವಿಗೆ ಷೋಕಾಸ್ ನೋಟಿಸ್ ಜಾರಿ
ಶಿವಮೊಗ್ಗದಲ್ಲಿ ಮಾರ್ಗರೇಟ್ ವಿರುದ್ಧ ಎಫ್‌ಐಆರ್
ಮೋದಿ ವಜಾಗೊಳಿಸಲು ಮೊಯ್ಲಿ ಬಿಜೆಪಿಗೆ ಆಗ್ರಹ