ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪ್ರತಿಪಕ್ಷ ಸ್ಥಾನಕ್ಕೆ ಸಿದ್ದು ಬಕಪಕ್ಷಿ: ಈಶ್ವರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರತಿಪಕ್ಷ ಸ್ಥಾನಕ್ಕೆ ಸಿದ್ದು ಬಕಪಕ್ಷಿ: ಈಶ್ವರಪ್ಪ
ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷ ಸ್ಥಾನಕ್ಕೆ ಬಕಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ ಎಂದು ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಸೋತರೆ ಪ್ರತಿಪಕ್ಷ ಸ್ಥಾನ ಬಿಡುವುದಿಲ್ಲ ಎಂದು ಖರ್ಗೆ ಹೇಳಿದ್ದಾರೆ. ಅವರಂತೂ ಗೆಲ್ಲುವುದಿಲ್ಲ. ಸಿದ್ದರಾಮಯ್ಯ ಕನಸು ನನಸಾಗದೆ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮುಂದುವರೆದು ತಮ್ಮಲೇ ಭಿನ್ನಾಭಿಪ್ರಾಯ ಶುರುವಾಗಲಿದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಹಲವು ಮತಗಟ್ಟೆಗಳಲ್ಲಿ ಏಜೆಂಟರೇ ಇರಲ್ಲಿಲ್ಲ. ಮತಗಟ್ಟೆ ಬಳಿ ಟೇಬಲ್ ಹಾಕಿಕೊಂಡು ಚೀಟಿ ಕೊಡುವವರು ಇರಲಿಲ್ಲ. ಇಂತಹ ದುಸ್ಥಿತಿ ಕಾಂಗ್ರೆಸ್‌ಗೆ ಬಂದೊದಗಿದೆ. ಇಂತಹ ಸ್ಥಿತಿ ಬರಬಾರದಿತ್ತು. ತಾವೆಂದೂ ಇಂಥ ಸ್ಥಿತಿ ನೋಡಿರಲ್ಲಿಲ್ಲ ಎಂದು ವ್ಯಂಗ್ಯವಾಡಿದರು.

ಶಿವಮೊಗ್ಗದಲ್ಲಿ ರಾಘವೇಂದ್ರ ಸಂಸತ್ ಸದಸ್ಯರಾಗಿ ಆಯ್ಕೆಯಾಗುವುದು ಖಚಿತ, ಇದರಲ್ಲಿ ಯಾವುದೇ ಸಂಶಯಗಳು ಉಳಿದಿಲ್ಲ; ಕೇವಲ ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ ಎಂದು ಈಶ್ವರಪ್ಪ ಇದೇ ಸಂದರ್ಭದಲ್ಲಿ ಭವಿಷ್ಯ ನುಡಿದಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹರಿಹರದಲ್ಲಿ ಮಾರಾಮಾರಿ: ಜೆಡಿಎಸ್ ಮುಖಂಡ ಸಾವು
'ಸಿಎಂ ಬಲಗೈಗೆ ಶಾಯಿ'-ಅಧಿಕಾರಿಗೆ ನೋಟಿಸ್
ಎಸ್‌ಎಸ್‌ಎಲ್‌ಸಿ ಫಲಿತಾಂಶ ವೆಬ್‌ದುನಿಯಾದಲ್ಲಿ
ಚಪ್ಪಲಿ ಎಸೆದಾತ ಜೆಡಿಎಸ್ ಕಾರ್ಯಕರ್ತನಲ್ಲ: ದೇವೇಗೌಡ
ರಾಘವೇಂದ್ರ ಸೋತರೆ ಸಿಎಂ ಸೋತಂತೆ: ಬಂಗಾರಪ್ಪ
ಬೆಂಗಳೂರು: ಹವಾಲ ಜಾಲ-ಇಬ್ಬರ ಬಂಧನ