ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಎಸ್‌ಎಸ್‌ಎಲ್‌ಸಿ ಶೇ. 75 ಫಲಿತಾಂಶ: ಉಡುಪಿ ಪ್ರಥಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಎಸ್‌ಎಲ್‌ಸಿ ಶೇ. 75 ಫಲಿತಾಂಶ: ಉಡುಪಿ ಪ್ರಥಮ
ನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಫಲಿತಾಂಶಗಳು ಪ್ರಕಟವಾಗಿದ್ದು ಶೇಕಡಾ 75.77ರಷ್ಟು ಪರೀಕ್ಷಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮೊದಲ ಸ್ಥಾನ ಉಡುಪಿ ಜಿಲ್ಲೆ ಹಾಗೂ ಕೊನೆಯ ಸ್ಥಾನ ಬೀದರ್ ಪಡೆದುಕೊಂಡಿದೆ ಎಂದು ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ತಿಳಿಸಿದೆ.

ಪ್ರತೀ ಸಲದ ಫಲಿತಾಂಶದಂತೆ ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಜಿಲ್ಲೆ ಶೇಕಡಾ 86.39 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ ಎರಡನೇ ಸ್ಥಾನ ಮಂಡ್ಯ ಜಿಲ್ಲೆ ಪಾಲಾಗಿದೆ. ಅದು ಶೇಕಡಾ 83.78 ಫಲಿತಾಂಶ ದಾಖಲಿಸಿದೆ. 82.23 ಶೇಕಡಾ ಫಲಿತಾಂಶ ಪಡೆದಿರುವ ಚಿಕ್ಕೋಡಿಯದ್ದು ಮೂರನೇ ಸ್ಥಾನ.

ಅತೀ ಕಡಿಮೆ ಫಲಿತಾಂಶ ದಾಖಲಿಸಿದ ಜಿಲ್ಲೆ ಬೀದರ್. ಇಲ್ಲಿ ಅರ್ಧಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇಕಡಾ 41.08 ಫಲಿತಾಂಶ ಇಲ್ಲಿ ದಾಖಲಾಗಿದೆ. ದಕ್ಷಿಣ ಕನ್ನಡ ನಾಲ್ಕನೇ ಸ್ಥಾನಕ್ಕೆ (82.23%) ಕುಸಿದಿರುವುದು ಗಮನಾರ್ಹ.

ಅದೇ ಹೊತ್ತಿಗೆ ಸರಕಾರಿ ಶಾಲೆಗಳು ಸೇರಿದಂತೆ ರಾಜ್ಯದ 35 ಶಾಲೆಗಳು ಶೂನ್ಯ ಫಲಿತಾಂಶವನ್ನು ಪಡೆದಿವೆ. ವಿದ್ಯಾರ್ಥಿಯೊಬ್ಬ 625ರಲ್ಲಿ 617 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾನೆ.

ಈ ಸಲ ಒಟ್ಟಾರೆ 8,58,391 ಪರೀಕ್ಷಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಅವರಲ್ಲಿ ಶೇಕಡಾ 67ರಷ್ಟು ವಿದ್ಯಾರ್ಥಿಗಳು ಹಾಗೂ ಶೇಕಡಾ 73ರಷ್ಟು ವಿದಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ.

ಶೇಕಡಾವಾರು ಜಿಲ್ಲಾ ಫಲಿತಾಂಶಗಳು ಹೀಗಿವೆ: 1. ಉಡುಪಿ 86.39; 2. ಮಂಡ್ಯ 83.78; 3. ಚಿಕ್ಕೋಡಿ 82.23; 4. ದಕ್ಷಿಣ ಕನ್ನಡ 82.02; 5. ಉತ್ತರಕನ್ನಡ 80.16; 6. ಬೆಳಗಾವಿ 79.37; 7. ತುಮಕೂರು 78.51; 8. ಬಾಗಲಕೋಟೆ 78.26; 9. ಕೊಡಗು 77.92; 10. ಗದಗ 77.67; 11. ಧಾರವಾಡ 76.43; 12. ರಾಮನಗರ 75.95; 13. ಬಿಜಾಪುರ 75.67; 14. ಬೆಂಗಳೂರು ಉತ್ತರ 73.92; 15. ಬಳ್ಳಾರಿ 73.82; 16. ಚಿಕ್ಕಮಗಳೂರು 73.62; 17. ಚಿತ್ರದುರ್ಗ 73.61; 18. ಬೆಂಗಳೂರು ದಕ್ಷಿಣ 73.54; 19. ಶಿವಮೊಗ್ಗ 73.38; 20. ಮಧುಗಿರಿ 73.28; 21. ಮೈಸೂರು 72.84; 22. ಬೆಂಗಳೂರು ಗ್ರಾಮೀಣ 72.65; 23. ಕೊಪ್ಪಳ 72.14; 24. ಕಳವು 71.92; 25. ರಾಯಚೂರು 71.78; 26. ಹಾವೇರಿ 71.73; 27. ಹಾಸನ 70.81; 28. ಗುಲ್ಬರ್ಗಾ 69.53; 29. ಕೋಲಾರ 68.48; 30. ಚಾಮರಾಜನಗರ 66.38; 31. ಚಿಕ್ಕಬಳ್ಳಾಪುರ 63.58; 32. ದಾವಣಗೆರೆ 62.94; 33. ಬೀದರ್ 41.08;

ನಿಮ್ಮ ವೆಬ್‌ದುನಿಯಾ ಕನ್ನಡದಲ್ಲಿ ಹಾಗೂ ಇಲಾಖೆಯ ವೆಬ್‌ಸೈಟಿನಲ್ಲೂ ಫಲಿತಾಂಶ ಪ್ರಕಟವಾಗಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ..
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರತಿಪಕ್ಷ ಸ್ಥಾನಕ್ಕೆ ಸಿದ್ದು ಬಕಪಕ್ಷಿ: ಈಶ್ವರಪ್ಪ
ಹರಿಹರದಲ್ಲಿ ಮಾರಾಮಾರಿ: ಜೆಡಿಎಸ್ ಮುಖಂಡ ಸಾವು
'ಸಿಎಂ ಬಲಗೈಗೆ ಶಾಯಿ'-ಅಧಿಕಾರಿಗೆ ನೋಟಿಸ್
ಎಸ್‌ಎಸ್‌ಎಲ್‌ಸಿ ಫಲಿತಾಂಶ ವೆಬ್‌ದುನಿಯಾದಲ್ಲಿ
ಚಪ್ಪಲಿ ಎಸೆದಾತ ಜೆಡಿಎಸ್ ಕಾರ್ಯಕರ್ತನಲ್ಲ: ದೇವೇಗೌಡ
ರಾಘವೇಂದ್ರ ಸೋತರೆ ಸಿಎಂ ಸೋತಂತೆ: ಬಂಗಾರಪ್ಪ