ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಧರ್ಮಸ್ಥಳ ಗಲಭೆ-ಬೆಳ್ತಂಗಡಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಧರ್ಮಸ್ಥಳ ಗಲಭೆ-ಬೆಳ್ತಂಗಡಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ಕರ್ತವ್ಯಕ್ಕಾಗಿ ಬೆಳ್ತಂಗಡಿಗೆ ಆಗಮಿಸಿದ್ದ ಆಂಧ್ರ ಪೊಲೀಸರು ದೇವರ ದರ್ಶನಕ್ಕಾಗಿ ಧರ್ಮಸ್ಥಳಕ್ಕೆ ತೆರಳಿದ್ದ ವೇಳೆ ನಡೆಸಿದ್ದ ಗೂಂಡಾಗಿರಿಯನ್ನು ಖಂಡಿಸಿ ಶನಿವಾರ ಹಿಂದೂ ಸಂಘಟನೆಗಳು ಬೆಳ್ತಂಗಡಿ ಬಂದ್‌ಗೆ ಕರೆ ನೀಡಿದ್ದು, ಅಂಗಡಿ-ಮುಂಗಟ್ಟುಗಳು ಸ್ವಯಂ ಬಂದ್‌ನೊಂದಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕ್ಷುಲ್ಲಕ ಕಾರಣಕ್ಕಾಗಿ ಆಂಧ್ರ ಪೊಲೀಸರು ಸ್ಥಳೀಯರಿಗೆ ತಮ್ಮ ಬಳಿಇದ್ದ ಲಾಠಿಯಿಂದ ಥಳಿಸಿ, ತಮ್ಮ ಕೈಲಿರುವ ಬಂಧೂಕಿನಿಂದ ಗುಂಡು ಹಾರಿಸಿದ ಪರಿಣಾಮ, ಇವ್ಯಾವುದಕ್ಕೂ ಸಂಬಂಧವೇ ಇಲ್ಲದ, ಕರ್ತವ್ಯ ಮುಗಿಸಿ ಹಾದಿನಡೆದುಕೊಂಡು ಹೋಗುತ್ತಿದ್ದ ಅಮಾಯಕನೊಬ್ಬ ಗುಂಡು ತಗಲಿ ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ಅಪರಾಹ್ನ ಸಂಭವಿಸಿತ್ತು. ಇದಲ್ಲದೆ ಘಟನೆಯಲ್ಲಿ ಕಾಲಿಗೆ ಗುಂಡು ತಗುಲಿರುವ ಇನ್ನೋರ್ವ ಯುವಕನ ಸ್ಥಿತಿ ಗಂಭೀರವಾಗಿದೆ. ರಾಜ್ಯದ ಸುಪ್ರಸಿದ್ಧ ಧಾರ್ಮಿಕ ಸ್ಥಳವಾಗಿರುವ ಧರ್ಮಸ್ಥಳದಲ್ಲಿ ಇಂತಹ ಘಟನೆ ಸಂಭವಿಸಿರುವುದು ಇದೇ ಮೊದಲಾಗಿದೆ.

ಘಟನೆಯ ಹಿನ್ನೆಲೆ:
ಚುನಾವಣಾ ಭದ್ರತಾ ಕರ್ತವ್ಯಕ್ಕಾಗಿ ಆಂಧ್ರದ 90 ಸಿಆರ್‌ಪಿಎಫ್ ಪೊಲೀಸರು ಆಗಮಿಸಿದ್ದರು. ಕರ್ತವ್ಯ ಮುಗಿದ ಬಳಿಕ ಧರ್ಮಸ್ಥಳಕ್ಕೆ ದೇವರ ದರ್ಶನಕ್ಕಾಗಿ ಆಗಮಿಸಿದ್ದರು. ಅಮಲೇರಿಸಿಕೊಂಡಿದ್ದರು ಎಂದು ಹೇಳಲಾಗಿರುವ ಇವರು ಬರುವಾಗಲೇ ದಾರಿಯಲ್ಲಿ ಉಜಿರೆಯ ಹೊಟೇಲಿನಲ್ಲಿ ಗಲಭೆ ಎಬ್ಬಿಸಿದ್ದರು. ದೇವರ ದರ್ಶನಕ್ಕೆ ಬಂದಿದ್ದ ಇವರು ಸರತಿಯ ಸಾಲಿನಲ್ಲಿ ನಿಲ್ಲಲು ನಿರಾಕರಿಸಿ ತಮಗೆ ಮುಖ್ಯದ್ವಾರದಿಂದ ನೇರವಾಗಿ ಪ್ರವೇಶ ನೀಡಬೇಕೆಂದೂ ಗಲಾಟೆ ಮಾಡಿದ್ದರು. ಬಳಿಕ ದೇವಳದ ಮ್ಯಾನೇಜರ್ ಇವರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದರು.

ಇದಾದ ಬಳಿಕ ಊಟಕ್ಕೆ ತೆರಳಿದ್ದ ಅವರು ದೇವಳದ ಅನ್ನಪೂರ್ಣ ಛತ್ರದ್ಲೂ ಗಲಭೆ ಎಬ್ಬಿಸಿದ್ದರು. ಹೋದಲೆಲ್ಲ ಥೇಟ್ ಗೂಂಡಾಗಳಂತೆಯೇ ವರ್ತಿಸಿದ್ದ ಅವರು ಬಸ್ ನಿಲ್ಲಿಸಿದ್ದ ಅಮೃತವರ್ಷಿಣಿ ಸಭಾಭವನದ ಬಳಿಕ ಒಂದಿಷ್ಟು ಮಕ್ಕಳು ಮತ್ತು ಯುವಕರು ಕ್ರಿಕೆಟ್ ಆಡುತ್ತಿದ್ದರು. ಅಲ್ಲಿಗೆ ಪೊಲೀಸರು ಬಂದಾಗ ಮೈಗೆ ಚೆಂಡು ತಾಗುವ ಸಾಧ್ಯತೆ ಇರುವುದರಿಂದ ತುಸು ದೂರಸರಿಯುವಂತೆ ವಿನಂತಿಸಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ.

ಬಳಿಕ ಸ್ಥಳೀಯ ಯುವಕರು ಕ್ಷಮೆ ಯಾಚಿಸಿದರೂ ತಣ್ಣಗಾಗದ ಕಾರಣ ಮಾತಿಗೆ ಮಾತು ಬೆಳೆದು, ಪೊಲೀಸರು ಲಾಠಿ ಪ್ರಹಾರ ನಡೆಸಿ ಬಸ್ಸಿನಲ್ಲಿ ಹೊರಡಲು ಅನುವಾದರು. ಸಿಟ್ಟಿಗೆದ್ದ ಯುವಕರು ಬಸ್ಸಿಗೆ ಕಲ್ಲು ತೂರಿದರು. ಅಷ್ಟರಲ್ಲಿ ಇನ್ನೊಂದು ಬಸ್ಸಿನಲ್ಲಿದ್ದ ಪೊಲೀಸ್ ತನ್ನ ಬಳಿ ಇದ್ದ ಕಾರ್ಬನ್ ಗನ್ ತೆಗೆದು ಗುಂಡು ಹಾರಿಸಿದ್ದು, ಇದಕ್ಕೆ ಇನ್ನೊಬ್ಬ ಸಾಥ್ ನೀಡಿದ್ದ. ಈ ಇಬ್ಬರು ಒಟ್ಟು 12 ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ.

ಈ ವೇಳೆ ಅಲ್ಲಿ ಕರ್ತವ್ಯ ಮುಗಿಸಿ ನಡೆದುಕೊಂಡು ಹೋಗುತ್ತಿದ್ದ, ಈ ಘಟನೆಗೆ ಸಂಬಂಧವೇ ಇಲ್ಲದ ಐತಪ್ಪ ಹರಿಜನ ಎಂಬವರಿಗೆ ಗುಂಡು ತಗಲಿ ಅವರು ಸ್ಥಳದಲ್ಲೇ ಮೃತಪಟ್ಟರು. ಐತಪ್ಪ(35) ಅವರು ದೇವಳದ ಅನ್ನಪೂರ್ಣ ಛತ್ರದ ನೌಕರರಾಗಿದ್ದಾರೆ. ಇದಲ್ಲದೆ ತಾಲೂಕು ಬಜರಂಗ ದಳದ ಸಂಚಾಲಕ ಭಾಸ್ಕರ ಹಾಗೂ ಅವರ ಸಹೋದರ ಉದಯ ಎಂಬವರಿಗೂ ಗುಂಡು ತಗುಲಿದ್ದು, ಉದಯ ಅವರ ಪರಿಸ್ಥಿತಿ ಗಂಭೀರವಾಗಿದೆ.

ಇದಲ್ಲದೆ, ಉಮಾನಾಥ ಶೆಟ್ಟಿ, ಮೋಹನ್ ಭಂಡಾರಿ, ಸಂತೋಷ್ ದಿಡಿಂಬಿ, ಸತೀಶ್, ಸುಧಾಕರ್, ನವೀನ್, ಮಂಜುನಾಥ್ ಎಂಬವರು ಆಂಧ್ರದ 'ಯೋಧರ' ಲಾಠಿಚಾರ್ಚ್‌ನಿಂದ ಗಾಯಗೊಂಡಿದ್ದಾರೆ.

ಅಂಧ್ರದ ಪೊಲೀಸರ ಅಂದಾದುಂದಿ ವರ್ತನೆಯಿಂದ ತೀವ್ರ ಆಕ್ರೋಶಗೊಂಡ ಸ್ಥಳೀಯರು, ಇವರ ದುರ್ವರ್ತನೆ ವಿರುದ್ಧ ಸ್ಥಳೀಯ ಪೊಲೀಸರು ತಕ್ಷಣ ಪ್ರಕರಣ ದಾಖಲಿಸದಿದ್ದಾಗ ಮತ್ತಷ್ಟು ಕ್ರೋಧಗೊಂಡರು.

ಬಳಿಕ ಆಂಧ್ರದ ಇಬ್ಬರು ಪೊಲೀಸರನ್ನು ಬಂಧಿಸಿ, 17 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರನ್ನು ದಿಚಾವರ್ ಮತ್ತು ಸುವರ್ಣರಾಣ ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಬ್ರಹ್ಮಣ್ಯೇಶ್ವರ ರಾವ್ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿ ಜನತೆಯನ್ನುದ್ದೇಶಿಸಿ ಮಾತನಾಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರಲ್ಲದೇ, ಮೃತರಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಲಾಗುವುದು ಎಂದು ಹೇಳಿ ಶಾಂತರಾಗುವಂತೆ ಜನತೆಗೆ ಮನವಿ ಮಾಡಿದರು.

ಮೃತ ಐತಪ್ಪ ಅವರ ಕುಟುಂಬಕ್ಕೆ ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯದಲ್ಲಿ ಕಾಂಗ್ರೆಸ್‌ಗೆ 20 ಸ್ಥಾನ ಖಚಿತ: ಶಿವಕುಮಾರ್
ಜೆಡಿಎಸ್ ಮುಖಂಡ ಕೊಂಡಜ್ಜಿ ಕೊಲೆ ಆರೋಪಿ ಸೆರೆ
ಎಸ್‌ಎಸ್‌ಎಲ್‌ಸಿ ಶೇ. 75 ಫಲಿತಾಂಶ: ಉಡುಪಿ ಪ್ರಥಮ
ಪ್ರತಿಪಕ್ಷ ಸ್ಥಾನಕ್ಕೆ ಸಿದ್ದು ಬಕಪಕ್ಷಿ: ಈಶ್ವರಪ್ಪ
ಹರಿಹರದಲ್ಲಿ ಮಾರಾಮಾರಿ: ಜೆಡಿಎಸ್ ಮುಖಂಡ ಸಾವು
'ಸಿಎಂ ಬಲಗೈಗೆ ಶಾಯಿ'-ಅಧಿಕಾರಿಗೆ ನೋಟಿಸ್