ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗಣಿ: ಗಡಿ ಸಮೀಕ್ಷೆಗೆ 'ಸುಪ್ರೀಂ' ಆರು ವಾರ ಗಡುವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣಿ: ಗಡಿ ಸಮೀಕ್ಷೆಗೆ 'ಸುಪ್ರೀಂ' ಆರು ವಾರ ಗಡುವು
ಗಣಿಧಣಿಗಳ ಅಕ್ರಮ ಗಣಿಗಾರಿಕೆಗೆ ಸುಪ್ರೀಂಕೋರ್ಟ್ ತಡೆ ಹಾಕಿದ್ದು, ಬಳ್ಳಾರಿ ಜಿಲ್ಲೆಯ ಗಡಿ ಭಾಗದಲ್ಲಿ ಆಗಿರುವ ಅರಣ್ಯಪ್ರದೇಶಗಳ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ಜಂಟಿ ಸಮೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಏಪ್ರಿಲ್ 22 ರಂದು ಕೇಂದ್ರ ಸರ್ಕಾರ ರೆಡ್ಡಿ ಸಹೋದರರ 5 ಗಣಿಗಳನ್ನು ಮುಚ್ಚುವಂತೆ ಆದೇಶ ನೀಡಿತ್ತು. ಹಾಗೂ ಆಂಧ್ರಪ್ರದೇಶ ಸರ್ಕಾರಕ್ಕೂ ಆದೇಶ ನೀಡಿತ್ತು. ಆದರೆ ರೆಡ್ಡಿ ಅವರು ಸರ್ಕಾರಕ್ಕೆ ಸವಾಲು ಹಾಕುವ ರೀತಿಯಲ್ಲಿ ಗಣಿಗಾರಿಕೆ ಮುಂದುವರಿಸುವುದಾಗಿ ಹೇಳಿಕೆ ನೀಡಿದ್ದರು.

ಜರ್ನಾದನ ರೆಡ್ಡಿ ಅವರ ಮೂರು ಕಂಪನಿಗಳು ಸೇರಿದಂತೆ 5 ಗಣಿ ಕಂಪನಿಗಳು ಅರಣ್ಯ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಿಸಿ ಗಣಿಗಾರಿಕೆ ನಡೆಸಿವೆಯೇ ಇಲ್ಲವೇ ಎಂಬ ಬಗ್ಗೆ ಸರ್ವೆ ನಡೆಸಲು ಆರು ತಿಂಗಳ ಕಲಾವಕಾಶವನ್ನು ಸರ್ವೋಚ್ಚ ನ್ಯಾಯಾಲಯ ನಿಗದಿ ಮಾಡಿದೆ.

ಸರ್ವೆ ಕಾರ್ಯವನ್ನು ಆರು ವಾರಗಳ ಒಳಗೆ ಮಾಡಿ ಮುಗಿಸುವಂತೆ ಮುಖ್ಯ ನ್ಯಾಯ ಮೂರ್ತಿಗಳನ್ನೊಳಗೊಂಡ ಪೀಠ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಸೂಚನೆ ನೀಡಿದೆ.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಹೇಳಿದಷ್ಟು ಬರೆದುಕೊಳ್ಳಿ': ಪತ್ರಕರ್ತರಿಗೆ ಶಾಸಕರ ತಾಕೀತು!
ಕೊಂಡಜ್ಜಿ ಸಾವು-ರಾಜಕೀಯ ಬಣ್ಣ ಬೇಡ: ರೆಡ್ಡಿ
ಧರ್ಮಸ್ಥಳ ಗಲಭೆ, ಇಂದು ಬೆಳ್ತಂಗಡಿ ಬಂದ್‌ಗೆ ಕರೆ
ರಾಜ್ಯದಲ್ಲಿ ಕಾಂಗ್ರೆಸ್‌ಗೆ 20 ಸ್ಥಾನ ಖಚಿತ: ಶಿವಕುಮಾರ್
ಜೆಡಿಎಸ್ ಮುಖಂಡ ಕೊಂಡಜ್ಜಿ ಕೊಲೆ ಆರೋಪಿ ಸೆರೆ
ಎಸ್‌ಎಸ್‌ಎಲ್‌ಸಿ ಶೇ. 75 ಫಲಿತಾಂಶ: ಉಡುಪಿ ಪ್ರಥಮ