ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹರಿಹರ ಪ್ರಕರಣ: ಸಿಬಿಐ ತನಿಖೆಗೆ ಖರ್ಗೆ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹರಿಹರ ಪ್ರಕರಣ: ಸಿಬಿಐ ತನಿಖೆಗೆ ಖರ್ಗೆ ಆಗ್ರಹ
ಹರಿಹರದಲ್ಲಿ ಶಾಸಕರ ಮುಂಭಾಗದಲ್ಲೇ ಜೆಡಿಎಸ್ ಕಾರ್ಯಕರ್ತ ಕೊಂಡಜ್ಜಿ ಕೊಲೆ ನಡೆದಿರುವುದನ್ನು ತೀವ್ರವಾಗಿ ಖಂಡಿಸಿದ ಕೆಪಿಸಿಸಿ ಮಾಜಿ ಅಧ್ಯಕ್ಷ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.

ಹರಿಹರದಲ್ಲಿ ನಡೆದಿರುವುದು ಎರಡು ಪಕ್ಷಗಳ ನಡುವಿನ ಘರ್ಷಣೆಯಲ್ಲ. ಶಾಸಕರೆದುರೇ ಜೆಡಿಎಸ್ ಕಾರ್ಯಕರ್ತನ ಕೊಲೆ ನಡೆದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಹಿನ್ನೆಲೆ ಘಟನೆಯನ್ನು ಸಿಬಿಐ ತನಿಖೆಗೆ ವಹಿಸುವುದರಿಂದ ನಿಷ್ಪಕ್ಷಪಾತ ವರದಿ ಪಡೆದು ತಪ್ಪಿತಸ್ಥರನ್ನು ಶಿಕ್ಷಿಸಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಾಗೆ ಬಳ್ಳಾರಿಯಲ್ಲಿ ರಾಜ್ಯದ ಗಡಿ ಒತ್ತುವರಿಯಾಗಿರುವ ಸಂಬಂಧ ಸರ್ವೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಸ್ವಾಗತಿಸಿದ ಮಲ್ಲಿಕಾರ್ಜುನ ಖರ್ಗೆ, ಸರ್ವೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸರ್ವೆ ನಡೆದ ನಂತರ ಸಚಿವ ಶ್ರೀರಾಮುಲು, ಜರ್ನಾಧನ ರೆಡ್ಡಿ ಹಾಗೂ ಕರುಣಾಕರ ರೆಡ್ಡಿ ತಪ್ಪಿತಸ್ಥರಲ್ಲದಿದ್ದರೆ ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಲಿ ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೆಡ್ಡಿ ಸಹೋದರರ ರಾಜಿನಾಮೆಗೆ ದೇಶಪಾಂಡೆ ಒತ್ತಾಯ
ಬೆಂಗಳೂರು: ಮೇ 10 ರಿಂದ ಸಂಡೆ ಬಜಾರ್ ರದ್ದು
ಕುಮಾರಸ್ವಾಮಿ ಡಿಸಿಗೆ ಬೆದರಿಕೆ ಹಾಕಿದ್ದರು: ಯಡಿಯೂರಪ್ಪ
ಆಗಸ್ಟ್‌ನೊಳಗೆ ಬಿಬಿಎಂಪಿ ಚುನಾವಣೆ: ಯಡಿಯೂರಪ್ಪ
ಕೈ ಕಡಿಯಿರಿ ಹೇಳಿಕೆ: ಕಾಗೋಡು ತಿಮ್ಮಪ್ಪಗೆ ಜಾಮೀನು ಮಂಜೂರು
ದೂರು ವಾಪಸ್ ಪಡೆಯಲು ಶಾಸಕ ರಾಜು ಧರಣಿ