ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚಿತ್ರದುರ್ಗ: ಮಂದಿರ ಧ್ವಂಸ, ಪ್ರತಿಭಟನೆ, ಅಘೋಷಿತ ಬಂದ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿತ್ರದುರ್ಗ: ಮಂದಿರ ಧ್ವಂಸ, ಪ್ರತಿಭಟನೆ, ಅಘೋಷಿತ ಬಂದ್
ಚಿತ್ರದುರ್ಗ: ಇಲ್ಲಿನ ಕೆಳಗೋಟಿ ಬಡಾವಣೆಯ ರಸ್ತೆ ಅಗಲೀಕರಣ ನೆಪದಲ್ಲಿ ನಗರಸಭೆಯು ಶಿವ ಮಂದಿರವನ್ನು ನೆಲ ಸಮಗೊಳಿಸಿರುವ ಘಟನೆಯನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದು, ನಗರದಲ್ಲಿ ಆಘೋಷಿತ ಬಂದ್ ಏರ್ಪಟ್ಟಿದೆ.

ಯಾವುದೇ ಮುನ್ಸೂಚನೆ ನೀಡದೆ, ನಗರಸಭೆಯು ಮಂದಿರವನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿರುವುದು ಸಾರ್ವಜನಿಕರನ್ನು ರೊಚ್ಚಿಗೆಬ್ಬಿಸಿದ್ದು, ಅವರು ಇಲ್ಲಿನ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಹಿಂದೂ ಸಂಘಟನೆಗಳ ಬೆಂಬಲದೊಂದಿಗೆ ನಡೆಸಿರುವ ಈ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿರುವ ಜಿಲ್ಲಾಧಿಕಾರಿಗಳು ಮುಷ್ಕರನಿರತರನ್ನು ಸಮಾಧಾನಿಸಲು ಯತ್ನಿಸಿ ಮಂದಿರವನ್ನು ಪುನರ್ ನಿರ್ಮಿಸುವ ಭರವಸೆ ನೀಡಿದ್ದಾರೆ. ಅಲ್ಲದೆ, ದೇವಾಲಯ ಧ್ವಂಸಕ್ಕೆ ಕಾರಣವಾಗಿರುವ ನಗರಸಭಾ ಅಧಿಕಾರಿಯನ್ನು ಅಮಾನತು ಮಾಡುವುದಾಗಿಯೂ ನುಡಿದರು.

ಜಿಲ್ಲಾಧಿಕಾರಿಗಳ ಭರವಸೆ ಬಳಿಕ ಸಾರ್ವಜನಿಕರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರಾದರೂ, ಸಾಯಂಕಾಲ ಐದುಗಂಟೆಯೊಳಗಾಗಿ ಮಂದಿರ ನಿರ್ಮಾಣಕ್ಕೆ ಆಡಳಿತವು ಮುಂದಾಗದಿದ್ದರೆ, ಸೋಮವಾರ ಮತ್ತೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಎಂ ಕಾರ್ಯದರ್ಶಿ ವಿರುದ್ಧ ಗೌಡರ ಸಮರ
ಬಂಗಾರಪ್ಪಗೆ 'ಕಪ್ಪ ಕೊಟ್ಟಿದ್ದು' ಕಪ್ಪು ಹಣ: ಸಂಗಮೇಶ್
ಹರಿಹರ ಪ್ರಕರಣ: ಸಿಬಿಐ ತನಿಖೆಗೆ ಖರ್ಗೆ ಆಗ್ರಹ
ರೆಡ್ಡಿ ಸಹೋದರರ ರಾಜಿನಾಮೆಗೆ ದೇಶಪಾಂಡೆ ಒತ್ತಾಯ
ಬೆಂಗಳೂರು: ಮೇ 10 ರಿಂದ ಸಂಡೆ ಬಜಾರ್ ರದ್ದು
ಕುಮಾರಸ್ವಾಮಿ ಡಿಸಿಗೆ ಬೆದರಿಕೆ ಹಾಕಿದ್ದರು: ಯಡಿಯೂರಪ್ಪ