ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಂದಕುಮಾರ್ ಪ್ರಕರಣ-ವರದಿ ಸಲ್ಲಿಕೆಗೆ ಸಿಎಂ ಆದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಂದಕುಮಾರ್ ಪ್ರಕರಣ-ವರದಿ ಸಲ್ಲಿಕೆಗೆ ಸಿಎಂ ಆದೇಶ
ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಬಿ.ಜಿ. ನಂದಕುಮಾರ್ ಅವರು ಬಿಜೆಪಿ ಪರ ಪ್ರಚಾರ ಮಾಡಿರುವ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ನೀಡಿದ್ದಾರೆ.

ನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರು ತನಿಖೆ ನಡೆಸಿ ನೀಡಿರುವ ವರದಿಯನ್ನೇ ಚುನಾವಣಾ ಆಯೋಗದ ಪತ್ರಕ್ಕೆ ಉತ್ತರವಾಗಿ ನೀಡುವುದಾಗಿ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಅನುಮತಿ ಪಡೆದು ನಂದಕುಮಾರ್ ಅವರು ಚಿಕ್ಕಮಗಳೂರಿನಲ್ಲಿ ಸಂಬಂಧಿಕರ ಮನೆಗೆ ತೆರಳಿದ್ದರು. ಆದರೂ ಚುನಾವಣಾ ಆಯೋಗ ಪೂರ್ವಾಗ್ರಹ ಪೀಡಿತವಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಅವರು ದೂರಿದ್ದಾರೆ.

ಇದೇ ವೇಳೆ ಜೆಡಿಎಸ್ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿಗಳು, ಪ್ರಾಮಾಣಿಕ ಅಧಿಕಾರಿಗಳಾದ ನಂದಕುಮಾರ್ ಮತ್ತು ವಿ.ಪಿ. ಬಳಿಗಾರ್ ವಿರುದ್ಧ ಜೆಡಿಎಸ್ ಮುಖಂಡರು ವಿನಾ ಕಾರಣ ಸುಳ್ಳು ಆರೋಪ ಮಾಡುತ್ತಾ ಅದನ್ನೇ ಸತ್ಯ ಎಂದು ಹೇಳಲು ಹೊರಟಿದ್ದಾರೆ ಎಂದು ಗುಡುಗಿದರು.

ಈ ನಡುವೆ ಹರಿಹರದಲ್ಲಿ ಜೆಡಿಎಸ್ ಮುಖಂಡ ವಿಜಯ್ ಕುಮಾರ್ ಕೊಂಡಜ್ಜಿ ಕೊಲೆ ಪ್ರಕರಣದ ಕುರಿತು ರಾಜ್ಯ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿತ್ರದುರ್ಗ: ಮಂದಿರ ಧ್ವಂಸ, ಪ್ರತಿಭಟನೆ, ಅಘೋಷಿತ ಬಂದ್
ಸಿಎಂ ಕಾರ್ಯದರ್ಶಿ ವಿರುದ್ಧ ಗೌಡರ ಸಮರ
ಬಂಗಾರಪ್ಪಗೆ 'ಕಪ್ಪ ಕೊಟ್ಟಿದ್ದು' ಕಪ್ಪು ಹಣ: ಸಂಗಮೇಶ್
ಹರಿಹರ ಪ್ರಕರಣ: ಸಿಬಿಐ ತನಿಖೆಗೆ ಖರ್ಗೆ ಆಗ್ರಹ
ರೆಡ್ಡಿ ಸಹೋದರರ ರಾಜಿನಾಮೆಗೆ ದೇಶಪಾಂಡೆ ಒತ್ತಾಯ
ಬೆಂಗಳೂರು: ಮೇ 10 ರಿಂದ ಸಂಡೆ ಬಜಾರ್ ರದ್ದು