ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಂಗಮೇಶ್ ಹೇಳಿಕೆ 'ಹಸಿ ಸುಳ್ಳು': ಬಂಗಾರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಗಮೇಶ್ ಹೇಳಿಕೆ 'ಹಸಿ ಸುಳ್ಳು': ಬಂಗಾರಪ್ಪ
1999ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ತಮಗೆ 50ಲಕ್ಷ ರೂ.ಕಪ್ಪು ಹಣ ನೀಡಿದ್ದೆ ಎನ್ನುವ ಭದ್ರಾವತಿ ಶಾಸಕ ಸಂಗಮೇಶ್ ಅರೋಪ ಹಸಿ ಸುಳ್ಳು ಎಂದಿರುವ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಅವರಿಗೆ ಆ ಕಪ್ಪು ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸಲಿ ಎಂದು ಒತ್ತಾಯಿಸಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕುಮ್ಮಕ್ಕಿನಿಂದ ಸಂಗಮೇಶ್ ಈ ಹೇಳಿಕೆ ನೀಡಿದ್ದಾರೆ ಎಂದು ದೂರಿದರು. ತಾವು ಅವರಿಂದ ಯಾವುದೇ ಹಣ ಪಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರ ಜತೆಗೂಡಿರುವ ಕಾಂಗ್ರೆಸ್ ಪಕ್ಷದ ಶಾಸಕ ಸಂಗಮೇಶ್ ಆ ಪಕ್ಷದ ವಿರುದ್ಧವೇ ಪ್ರಚಾರ ನಡೆಸಿದ್ದಾರೆ. ಈ ಕುರಿತು ಹೈಕಮಾಂಡ್‌ಗೆ ಪತ್ರ ಬರೆದು ಸಂಗಮೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳುವುದಾಗಿ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಂದಿ ಜ್ವರ ಸೋಂಕು ತಡೆಗೆ ಕ್ರಮ: ಅಶೋಕ್
ಕಿರಿಯ ವೈದ್ಯರ ಮುಷ್ಕರಕ್ಕೆ ಹೈಕೋರ್ಟ್ ತಪರಾಕಿ
ಜೆಡಿಎಸ್ ಮುಖಂಡನ ಕೊಲೆ: ಅಧಿಕಾರಿಗಳಿಬ್ಬರ ಅಮಾನತು
ದೇವಸ್ಥಾನ ತೆರವು: ಬಜರಂಗದಳ ಪ್ರತಿಭಟನೆ
ಕಾಯ್ದೆ ಉಲ್ಲಂಘನೆ: ದೇವೇಗೌಡ-ರೇವಣ್ಣಗೆ ನೋಟಿಸ್
ನಂದಕುಮಾರ್ ಪ್ರಕರಣ-ವರದಿ ಸಲ್ಲಿಕೆಗೆ ಸಿಎಂ ಆದೇಶ