ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಚಿವರ ನಿವಾಸ ಅವ್ಯವಹಾರ: ತನಿಖೆಗೆ ಆದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಚಿವರ ನಿವಾಸ ಅವ್ಯವಹಾರ: ತನಿಖೆಗೆ ಆದೇಶ
ಸಚಿವರ ನಿವಾಸ ದುರಸ್ತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ತನಿಖೆಗೆ ಆದೇಶಿಸಿದ್ದಾರೆ.

ಸಚಿವರ ಮನೆ ದುರಸ್ತಿ ನೆಪದಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ ಅವರು, ಅವ್ಯವಹಾರದ ಕುರಿತು ವರದಿ ನೀಡಲು ಒಂದು ವಾರಗಳ ಕಾಲ ಗಡುವು ನೀಡಿರುವುದಾಗಿ ತಿಳಿಸಿದರು.

ಯುವ ಕಾಂಗ್ರೆಸ್ ಪ್ರತಿಭಟನೆ: ಸಚಿವರ ನಿವಾಸ ನವೀಕರಣ ಹೆಸರಲ್ಲಿ ನಡೆದಿರುವ ಭಾರಿ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ಬೆಂಗಳೂರು ಮಹಾನಗರ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದ್ದರು.

ನವೀಕರಣದ ನೆಪದಲ್ಲಿ ಶೇ.50ರಷ್ಟು ಹಣ ದುರುಪಯೋಗ ಆಗಿರುವ ಬಗ್ಗೆ ಸಚಿವರಾದ ಸುರೇಶ್ ಕುಮಾರ್ ಮತ್ತು ಪ್ರೊ.ಮುಮ್ತಾಜ್ ಆಲಿ ಖಾನ್ ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಸರ್ಕಾರದ ದುರಾಡಳಿತಕ್ಕೆ ಇದು ಸಾಕ್ಷಿಯಾಗಿದೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ವಸತಿ ಮಹಾಮಂಡಲದ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಡಿಯೂರಪ್ಪ ಬಹಿರಂಗ ಚರ್ಚೆಗೆ ಬರಲಿ: ಎಚ್‌ಡಿಕೆ ಸವಾಲು
ಚುನಾವಣೆ ಬಳಿಕ ವೈದ್ಯರ ಬೇಡಿಕೆ ಈಡೇರಿಕೆ: ಸಿಎಂ
ಬೆಂಗಳೂರು: ಕೊಲೆ ಆರೋಪಿಗಳ ಬಂಧನ
ಸಂಗಮೇಶ್ ಹೇಳಿಕೆ 'ಹಸಿ ಸುಳ್ಳು': ಬಂಗಾರಪ್ಪ
ಹಂದಿ ಜ್ವರ ಸೋಂಕು ತಡೆಗೆ ಕ್ರಮ: ಅಶೋಕ್
ಕಿರಿಯ ವೈದ್ಯರ ಮುಷ್ಕರಕ್ಕೆ ಹೈಕೋರ್ಟ್ ತಪರಾಕಿ