ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮೇ 9: ವೆಬ್‌ದುನಿಯಾದಲ್ಲಿ ಪಿಯುಸಿ ಫಲಿತಾಂಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇ 9: ವೆಬ್‌ದುನಿಯಾದಲ್ಲಿ ಪಿಯುಸಿ ಫಲಿತಾಂಶ
ದ್ವಿತೀಯ ಪಿಯುಸಿ ಪರೀಕ್ಷೆ ಮೇ 9ರಂದು ವೆಬ್‌ದುನಿಯಾ ಕನ್ನಡ ಹಾಗೂ ಇಲಾಖೆಯ ವೈಬ್‌ಸೈಟ್‌ನಲ್ಲಿ ಪ್ರಕಟಗೊಳ್ಳಲಿದೆ. ಮೇ 10ರಂದು ಎಲ್ಲಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪದವಿ ಪೂರ್ವ ನಿರ್ದೇಶನಾಲಯ ಪ್ರಕಟಣೆ ತಿಳಿಸಿದೆ.

ಪಿಯುಸಿ ಮೌಲ್ಯಮಾಪನ ಹತ್ತು ದಿನಗಳ ಹಿಂದೆ ಪೂರ್ಣಗೊಂಡಿದ್ದು, ಇದೀಗ ಮೇ 6,7 ಹಾಗೂ 8ರಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ ಮುಗಿದ ಬಳಿಕ ಫಲಿತಾಂಶ ಘೋಷಿಸಲಾಗುವುದು ಎಂದು ಇಲಾಖೆ ಹೇಳಿದೆ. ಮೇ 9ರಂದು ವೆಬ್‌ದುನಿಯಾ ಹಾಗೂ ಇಲಾಖೆಯ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.

ಈ ಬಾರಿ ರಾಜ್ಯದಲ್ಲಿ ಒಟ್ಟು 6.2ಲಕ್ಷ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದರು. ರಾಜ್ಯದ 856ಕೇಂದ್ರಗಳಲ್ಲಿ ಮಾರ್ಚ್ 13ರಿಂದ 26ರವರೆಗೆ ಪರೀಕ್ಷೆ ನಡೆದಿತ್ತು. ಕಳೆದ ಬಾರಿಗಿಂತ ಈ ಬಾರಿ 50ಸಾವಿರ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆದಿದ್ದಾರೆ. 1,72,676 ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, 3,10,584 ಕಲಾ ಹಾಗೂ 1,36,859 ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 3.28ಲಕ್ಷ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದವರಾಗಿದ್ದಾರೆ.

ಮೇ 9ರಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಫಲಿತಾಂಶದ ವಿವರಗಳನ್ನು ನೀಡಲಿದ್ದಾರೆ. ಮಧ್ಯಾಹ್ನ ನಂತರ ಪಿಯುಸಿ ಫಲಿತಾಂಶವು ವೆಬ್‌ದುನಿಯಾದಲ್ಲಿ ಲಭ್ಯವಾಗಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಂಗಾರಪ್ಪ ಮರಕೋತಿ ರಾಜಕೀಯ ಮಾಡ್ತಾರೆ: ಸಂಗಮೇಶ್
ಸಚಿವರ ನಿವಾಸ ಅವ್ಯವಹಾರ: ತನಿಖೆಗೆ ಆದೇಶ
ಯಡಿಯೂರಪ್ಪ ಬಹಿರಂಗ ಚರ್ಚೆಗೆ ಬರಲಿ: ಎಚ್‌ಡಿಕೆ ಸವಾಲು
ಚುನಾವಣೆ ಬಳಿಕ ವೈದ್ಯರ ಬೇಡಿಕೆ ಈಡೇರಿಕೆ: ಸಿಎಂ
ಬೆಂಗಳೂರು: ಕೊಲೆ ಆರೋಪಿಗಳ ಬಂಧನ
ಸಂಗಮೇಶ್ ಹೇಳಿಕೆ 'ಹಸಿ ಸುಳ್ಳು': ಬಂಗಾರಪ್ಪ