ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೊಂಡಜ್ಜಿ ಸಾವಿಗೆ ಹೃದ್ರೋಗ ಕಾರಣ: ರೇಣುಕಾಚಾರ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊಂಡಜ್ಜಿ ಸಾವಿಗೆ ಹೃದ್ರೋಗ ಕಾರಣ: ರೇಣುಕಾಚಾರ್ಯ
ಜೆಡಿಎಸ್ ಕಾರ್ಯಕರ್ತ ಕೊಂಡಜ್ಜಿ ವಿಜಯ ಪ್ರಕಾಶ್ ಹೃದ್ರೋಗದಿಂದ ಸತ್ತಿದ್ದೆ ಹೊರತು ಹರಿಹರ ಶಾಸಕ ಬಿ.ಟಿ.ಹರೀಶ್ ಅವರಿಂದಲ್ಲ ಎಂದು ಶಾಸಕ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಂಡಜ್ಜಿ ಮೊದಲಿನಿಂದಲೂ ಹೃದ್ರೋಗದಿಂದ ಬಳಲುತ್ತಿದ್ದು, ಅಂದು ಆಕಸ್ಮಿಕವಾಗಿ ಹೃದ್ರೋಗದಿಂದಲೇ ಸಾವನ್ನಪ್ಪಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ.

ಈ ಘಟನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಕರಣವನ್ನು ಮತ್ತಷ್ಟು ದೊಡ್ಡದು ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿವೆ ಎಂದರು.

ಏ.30ರ ಮತದಾನದಂದು ಬೆಳಿಗ್ಗೆಯಿಂದ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆಯುತ್ತಿತ್ತು. ಸ್ಥಳೀಯ ಶಾಸಕ ಹರೀಶ್ ಘಟನೆಯನ್ನು ತಿಳಿಗೊಳಿಸಲು ಹೋಗಿದ್ದು. ಈ ನಡುವೆ ಕೊಂಡಜ್ಜಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂದರು. ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪೊಲೀಸರ ಮಾರ್ಗದರ್ಶನದಲ್ಲಿ ತನಿಖೆಗೆ ಆದೇಶ ನೀಡಿದ್ದಾರೆ. ಇದನ್ನು ಸಿಬಿಐಗೆ ಒಪ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ: ಸಿಎಂ
ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ
ಮುಷ್ಕರಕ್ಕೆ ಕಾರಣ ಕೊಡಿ: ವೈದ್ಯರಿಗೆ ನೋಟಿಸ್
ಕ್ಯಾತಮಾರನಹಳ್ಳಿ ಗಲಭೆ: ಬಂಧಿತರ ಬಿಡುಗಡೆಗೆ ಕೆಎಫ್‌ಡಿ ಪ್ರತಿಭಟನೆ
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮಸ್ಕಿ ಬಂಧನಕ್ಕೆ ಆಗ್ರಹ
ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದ ವಿವರ ನೀಡಿ: ಬಿಜೆಪಿ