ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆದಾಯದಲ್ಲಿ 8024ಕೋಟಿ ರೂ.ಕೊರತೆ: ಯಡಿಯೂರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆದಾಯದಲ್ಲಿ 8024ಕೋಟಿ ರೂ.ಕೊರತೆ: ಯಡಿಯೂರಪ್ಪ
ರಾಜ್ಯದ ಆದಾಯದಲ್ಲಿ ಶೇ.6 ರಷ್ಟು ಕಡಿಮೆಯಾಗಿದ್ದು, ಕಳೆದ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ 2008-2009 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟಾರೆ 8024 ಕೋಟಿ ರೂ.ಗಳಷ್ಟು ಹಣದ ಕೊರತೆ ಎದುರಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಆರ್ಥಿಕ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು ಒಟ್ಟಾರೆ 31,265 ಕೋಟಿ ರೂ.ಗಳ ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ ಸಂಗ್ರಹವಾಗಿರುವ ಹಣ 26906 ಕೋಟಿ ರೂ.ಗಳು ಮಾತ್ರ. 4359 ಕೋಟಿ ರೂ.ಗಳ ಆದಾಯದ ಕೊರತೆಯಾಗಿದೆ ಎಂದು ತಿಳಿಸಿದರು.

ಈ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹ ಹೆಚ್ಚು ಮಾಡಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ. ಹಣ ದುರ್ಬಳಕೆ ತಡೆಗಟ್ಟಲು ಸರಿಯಾದ ಯೋಜನೆಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆಗಳನ್ನು ರೂಪಿಸಿದ ನಂತರ ಮತ್ತೊಮ್ಮೆ ಸಭೆ ಸೇರಿ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.

ನಿರೀಕ್ಷೆಯಷ್ಟು ಹಣ ಸಂಗ್ರಹಣೆಯಾಗದಿದ್ದರು ನೆರೆ ಆಂಧ್ರಪ್ರದೇಶಕ್ಕೆ ಹೋಲಿಕೆ ಮಾಡಿದರೆ ರಾಜ್ಯ ಉತ್ತಮ ಸ್ಥಿತಿಯಲ್ಲಿದೆ. ಲಭ್ಯ ಮಾಹಿತಿಯ ಪ್ರಕಾರ ಇಡೀ ದೇಶದಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ ಎಂದರು. ಆದಾಯದಲ್ಲಿ ಹಿಂದಿನ ಹಣಕಾಸು ವರ್ಷಕ್ಕಿಂತ ಕಳೆದ ಹಣಕಾಸು ವರ್ಷದಲ್ಲಿ ಶೇ.11.5ರಷ್ಟು ಹೆಚ್ಚಿನ ಹಣ ಸಂಗ್ರಹಣೆಯಾಗಿದೆ ಎಂದು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಯುಷ್ ನಿರ್ದೇಶಕ ಡಾ.ಪ್ರಕಾಶ್ 'ನಿರ್ದೋಷಿ'
ವೈದ್ಯರ ಕರ್ತವ್ಯ ನಿರ್ವಹಣೆಗೆ ತಡೆ ಇಲ್ಲ: ಹೈಕೋರ್ಟ್
ಕೊಂಡಜ್ಜಿ ಸಾವಿಗೆ ಹೃದ್ರೋಗ ಕಾರಣ: ರೇಣುಕಾಚಾರ್ಯ
ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ: ಸಿಎಂ
ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ
ಮುಷ್ಕರಕ್ಕೆ ಕಾರಣ ಕೊಡಿ: ವೈದ್ಯರಿಗೆ ನೋಟಿಸ್